ವಜ್ರ ಮಹೋತ್ಸವ ಕಾರ್ಯಕ್ರಮ

ಮಂಗಳೂರು, ಫೆ. 11: ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ. ಜಿ. ಕೆ. ಜಗದೀಶ್ ಅವರು ‘ವಜ್ರ-ಮಹೋತ್ಸವ’ ಲಾಂಛನವನ್ನು ಬಿಡುಗಡೆಗೊಳಿಸಿದರು.
ಮುಖ್ಯ ಅಥಿತಿಗಳಾಗಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್. ಆರ್. ಉಮೇಶ್ ಉಪನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್, ರಾಜ್ಯ ಸರಕಾರಿ ನೌಕರ ಕೇಂದ್ರ ಸಂಘ ಬೆಂಗಳೂರು ಇದರ ಜಂಟಿ ಕಾರ್ಯದರ್ಶಿ ಕೆ. ಜಯಕೀರ್ತಿ ಜೈನ್ ‘ವಜ್ರಮಹೋತ್ಸವ’ ಸಂಚಾಲಕ ರಮೇಶ್ ರೊಡ್ರಿಯನ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಅದ್ಯಕ್ಷಪ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಸ್ವಾಗತಿಸಿದರು. ಪ್ರಧಾನ-ಕಾರ್ಯದರ್ಶಿ ಎಂ. ಉದಯ ರಂಜನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಚಿವಾಲಯದ ಗ್ರೂಪ್ ‘ಡಿ’ ನೌಕರರಾದ ಹಾಗೂ ರಾಜ್ಯ ಸರ್ವೋತ್ತಮ ಪ್ರಶಸ್ತಿ ಪಡೆದಿರುವ ಜಗದೀಶ ಕೆ. ಟಿ. ಅವರನ್ನು ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಯಕೀರ್ತಿ ಜೈನ್‌ಅವರು ಶಾಲು ಹೊದಿಸಿ ಹಣ್ಣು ಹಂಪಲು ಸ್ಮರಣಿಕೆ ನೀಡಿ ಸನ್ಮಾನಿಸಿದರು.





