ರಾಜ್ಯಮಟ್ಟಕ್ಕೆ ಎಚ್.ಆರ್.ರಾಧಾಕೃಷ್ಣ

ಮಂಗಳೂರು, ಫೆ. 11: ಮಂಗಳಾ ಕ್ರೀಡಾಂಗಣದಲ್ಲಿ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸುರತ್ಕಲ್‌ನ ಹಿರಿಯ ಕ್ರೀಡಾಕೂಟ ಎಚ್.ಆರ್.ರಾಧಾಕೃಷ್ಣ ಡಿಸ್ಕಸ್ ಥ್ರೋದಲ್ಲಿ ಪ್ರಥಮ, ಶಾಟ್‌ಪುಟ್‌ನಲ್ಲಿ ದ್ವಿತೀಯ, ಹ್ಯಾಮರ್ ಥ್ರೋನಲ್ಲಿ ತೃತೀಯ ಬಹುಮಾನ ಪಡೆದು ಫೆ. 18ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ
Next Story





