ಸೌದಿ: 6.8 ಲಕ್ಷ ಮಾದಕ ದ್ರವ್ಯ ಮಾತ್ರೆಗಳ ವಶ; 5 ಬಂಧನ
.jpg)
ಜಿದ್ದಾ (ಸೌದಿ ಅರೇಬಿಯ), ಫೆ. 11: ರಿಯಾದ್‌ನಲ್ಲಿರುವ ಮಾದಕ ದ್ರವ್ಯ ನಿಗ್ರಹ ತಂಡಗಳು ಕಳೆದ ಎರಡು ದಿನಗಳಲ್ಲಿ ಎರಡು ಕಾರ್ಯಾಚರಣೆಗಳನ್ನು ನಡೆಸಿ 6.8 ಲಕ್ಷ ಮೆತಮ್‌ಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿವೆ ಹಾಗೂ ಐವರನ್ನು ಬಂಧಿಸಿವೆ.
ರಿಯಾದ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಮಾದಕ ದ್ರವ್ಯ ನಿಗ್ರಹ ತಂಡಗಳು ದಾಳಿ ನಡೆಸಿ 4.24 ಲಕ್ಷ ಮೆತಮ್‌ಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡವು ಹಾಗೂ ಮೂವರನ್ನು ಬಂಧಿಸಿದವು.
ಇನ್ನೊಂದು ಕಾರ್ಯಾಚರಣೆಯಲ್ಲಿ, ದ್ರವ್ಯ ನಿಗ್ರಹ ತಂಡಗಳು ದಾಳಿ ನಡೆಸಿ 2.57 ಲಕ್ಷ ಮೆತಮ್‌ಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡವು ಹಾಗೂ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದವು.
Next Story





