ಲಾರಿಯ ಸ್ಟೇರಿಂಗ್ ಅವಘಡ: ಚಾಲಕ ಸ್ಥಳದಲ್ಲೇ ಸಾವು

ಕುಶಾಲನಗರ, ಫೆ.11: ಕೊಣನೂರು ಕೆರೆಯ ಸಮೀಪ ಚಲಿಸುತ್ತಿದ್ದ ಲಾರಿಯೊಂದರ ಸ್ಟೇರಿಂಗ್ ಕಿತ್ತು ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ಮೋರಿಗೆ ಢಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಲಾರಿ ಚಾಲಕನನ್ನು ಪುಟ್ಟೇಗೌಡ ಎಂದು ಗುರುತಿಸಲಾಗಿದ್ದು, ಇವರು ಕುಶಾಲನಗರದ ಕೂಡ್ಲೂರು ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅರಕಲಗೂಡು ಸಮೀಪದ ಹಳ್ಳಿಯೊಂದಕ್ಕೆ ಸರಕು ಸಾಗಣೆ ಮಾಡಿ ಕೂಡ್ಲೂರಿಗೆ ಹಿಂದಿರುಗಿ ಬರುತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಮೃತರು ಪತ್ನಿ ಮತ್ತು 3ಪುತ್ರಿಯರನ್ನು ಅಗಲಿದ್ದಾರೆ.
ಸ್ಥಳಕ್ಕೆ ಕೊಣನೂರು ಪೊಲೀಸ್ ಠಾಣಾಧಿಕಾರಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





