ಅಶ್ವತ್ಥಡಿ: ಜಾನುವಾರು ಕಳವು; ದೂರು ದಾಖಲು
ಉಪ್ಪಿನಂಗಡಿ, ೆ.11: ವಿಧವೆ ಮಹಿಳೆಯೋರ್ವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಆಕೆಯ ದನ ಹಾಗೂ ಆಡನ್ನು ಅಮಾ ನುಷವಾಗಿ ಹಿಂಸಿಸಿ ಬಲವಂತವಾಗಿ ಎಳೆದೊಯ್ದ ಘಟನೆ ನೆಲ್ಯಾಡಿ ಗ್ರಾಮದ ಅಶ್ವತ್ಥಡಿ ಎಂಬಲ್ಲಿ ಶನಿವಾರ ನಡೆದಿದೆ.
ದಿ. ನಾರಾಯಣ ಗೌಡ ಎಂಬವರ ಪತ್ನಿ ಕಲಾವತಿ ಎಂಬ ವರ ಜಮೀನಿಗೆ ಮಧ್ಯಾಹ್ನ ಅಕ್ರಮವಾಗಿ ಪ್ರವೇಶಿಸಿದ ಕೊಕ್ಕಡದ ರೋನಾಲ್ಡ್ ಹಾಗೂ ಮಂಚ ಎಂಬವರು ಮನೆ ಹತ್ತಿರ ಕಟ್ಟಿ ಹಾಕಿದ್ದ ತುಂಬು ಗರ್ಭಿಣಿ ದನವನ್ನು ಅಮಾನುಷವಾಗಿ ಹಿಂಸಿಸಿ ಎಳೆದೊಯ್ದಿರುವುದಲ್ಲದೆ, ಅಲ್ಲೇ ಕಟ್ಟಿ ಹಾಕಿದ್ದ ಗಂಡು ಆಡನ್ನೂ ಕೂಡಾ ಕದ್ದೊಯ್ದಿದ್ದಾರೆಂದು ಕಲಾವತಿ ನೆಲ್ಯಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಲಾವತಿ ತನ್ನ ತುಂಬು ಗರ್ಭಿಣಿ ದನವನ್ನು ಆರೋಪಿಗಳಿಂದ ರಕ್ಷಿಸಿಕೊಡುವಂತೆ ಯಾಚಿಸಿದ್ದಾರೆ.
ಪೂರ್ವನಿಯೋಜಿತ ಕೃತ್ಯದ ಶಂಕೆ: ಮಧ್ಯಾಹ್ನ ತನ್ನ ಜಮೀನಿಗೆ ನುಗ್ಗಿ ಜಾನುವಾರು ಎಳೆದೊಯ್ದ ಪ್ರಕರಣದ ಬಗ್ಗೆ ದೂರು ನೀಡಲು ಕಲಾವತಿ ಪೊಲೀಸ್ ಠಾಣೆಗೆ ಬಂದಾಗ, ಆಕೆಯ ವಿರುದ್ದವೇ ಜಾತಿನಿಂದನೆ ದೂರು ದಾಖಲಾಗಿತ್ತು ಎನ್ನಲಾಗಿದೆ. ಆರೋಪಿಗಳು ತನ್ನ ಜಮೀನಿಗೆ ನುಗ್ಗಿರುವುದೇ 12ಗಂಟೆಗೆ, ಆದರೆ ಬೆಳಗ್ಗೆ 10ಕ್ಕೆ ತಾನು ಹೇಗೆ ಅವರಿಗೆ ಜಾತಿ ನಿಂದನೆ ಮಾಡಲು ಸಾಧ್ಯ ಎಂದು ಕಲಾವತಿ ಪ್ರಶ್ನಿಸಿದ್ದಾರೆ. ಆರೋಪಿಗಳು ತನ್ನ ಜಮೀನಿಗೆ ನುಗ್ಗುವ ಮೊದಲೇ ತನ್ನ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಗೆ ಒಳ ಪಡುವ ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ರೀತಿ ಪೂರ್ವಯೋಜಿತ ನೆಲೆಯಲ್ಲಿ ತನ್ನ ಮೇಲೆ ಪ್ರಕರಣ ದಾಖಲಾದರೆ ವಿಧವೆಯಾದ ತಾನು ಬದುಕು ವುದಾದರೂ ಹೇಗೆ ಎಂದು ಪೊಲೀಸ್ ಅಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.







