ಪಟಾಕಿ ತಯಾರಿಕೆ ಘಟಕದಲ್ಲಿ ಬೆಂಕಿ
ಕಾರ್ಮಿಕರಿಬ್ಬರ ಸಜೀವ ದಹನ
ವಿರುಧನಗರ(ತ.ನಾ),ಫೆ.11: ಇಲ್ಲಿಯ ಎಳಯಾರಂ ಪನ್ನೈನಲ್ಲಿಯ ಪಟಾಕಿ ತಯಾರಿಕೆ ಘಟಕದಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕಾರ್ಮಿಕರಿಬ್ಬರು ಸಜೀವ ದಹನಗೊಂಡಿದ್ದು, ಇತರ ಕೆಲವರು ಗಾಯಗೊಂಡಿದ್ದಾರೆ.
ಅವಶೇಷಗಳಿಂದ ಸುಟ್ಟು ಕರಕಲಾಗಿರುವ ಇಬ್ಬರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಬೆಳಗ್ಗೆ ಫ್ಯಾಕ್ಟರಿಯಲ್ಲಿ ಕೆಲಸ ಆರಂಭಗೊಂಡ ಸ್ವಲ್ಪ ಹೊತ್ತಿನ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಘಟಕವನ್ನು ಆವರಿಸಿಕೊಂಡಿತ್ತು. ಅಗ್ನಿಶಾಮಕ ಯಂತ್ರಗಳು ಹಲವಾರು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ಆರಿಸಿವೆ.
ಫ್ಯಾಕ್ಟರಿಯ ಮಾಡಿನ ಕೆಲವು ತಗಡಿನ ಶೀಟುಗಳು ಬೆಂಕಿಯಿಂದಾಗಿ ಕೆಳಕ್ಕೆ ಬಿದ್ದಿದು,್ದ ಅವುಗಳಡಿ ಸಿಕ್ಕಿಹಾಕಿಕೊಂಡವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಬೆಂಕಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
Next Story





