ದೀಪಾ ಜಯಕುಮಾರ್ ಪಾರ್ಟಿಗೆ ಅಮ್ಮಾ ಡಿಎಂಕೆ ಎನ್ನುವ ಹೆಸರು?
ಚೆನ್ನೈ,ಫೆ.11: ಶಶಿಕಲಾರ ಕೈಯಲ್ಲಾದ ಎಡಿಎಂಕೆಗೆ ಬದಲಾಗಿ ಜಯಲಲಿತಾರ ಸೋದರ ಸಂಬಂಧಿ ದೀಪಾ ಜಯಕುಮಾರ್ ರೂಪು ನೀಡಲಿರುವ ಪಕ್ಷಕ್ಕೆ ಅಮ್ಮಾ ಡಿಎಂಕೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎನ್ನುವ ಸೂಚನೆ ಲಭಿಸಿದೆ. ಜಯಲಲಿತಾರ ಜನ್ಮದಿನವಾದ ಫೆ.24ಕ್ಕೆ ದೀಪಾರ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿದು ಬಂದಿದೆ. ಅದೇವೇಳೆ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂರೊಂದಿಗೆ ಸಹಕರಿಸುವ ಸಾಧ್ಯತೆಯನ್ನೂ ದೀಪಾ ನಿರಾಕರಿಸಿಲ್ಲ. ಕಾಂಗ್ರೆಸ್ ವಕ್ತಾರ ಇವಿಕೆಎಸ್ ಇಳಂಗೋವನ್ ಸಹೋದರ ಇನಿಯನ್ ಸಂಪತ್ ಅಮ್ಮಾ ಡಿಎಂಕೆ ಎನ್ನುವ ಹೆಸರಿನಲ್ಲಿ ಪಕ್ಷ ಕಟ್ಟಿದ್ದಾರೆ. ಅವರು ಈ ಹೆಸರನ್ನು ಅವರು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಅಮ್ಮಾ ಡಿಎಂಕೆ ಎನ್ನುವ ಹೆಸರು ದೀಪಾರಿಗೆ ಸಿಗಬೇಕಿದ್ದರೆ ಸಂಪತ್‌ರನ್ನು ಕೂಡಾ ತನ್ನೊಡನೆ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪನ್ನೀರ್ ಸೆಲ್ವಂರೊಂದಿಗೆ ಸಹಕರಿಸುವ ವಿಭಾಗ ಎಐಡಿಎಂಕೆ (ಅಮ್ಮಾ) ಎನ್ನುವ ಹೆಸರಿನಲ್ಲಿ ಪಾರ್ಟಿ ಕಟ್ಟಲಿದೆ ಎನ್ನುವ ಸುದ್ದಿಯೂ ಹರಡಿದೆ. ದೀಪಾ ಜಯಕುಮಾರ್‌ರಿಗೆ ಇದರಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನ ವಹಿಸಿಕೊಡುವ ಚಿಂತನೆಯೂ ನಡೆಯುತ್ತಿದೆ.





