ಜೇನು ಮೇಳ, ಸಾವಯವ ಮೇಳಕ್ಕೆ ಚಾಲನೆ

ಮಂಗಳೂರು, ೆ.11: ನಗರದ ಕದ್ರಿ ಉದ್ಯಾನವನದಲ್ಲಿ ದ.ಕ. ಜಿಪಂ, ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೇನು ಮೇಳ ಮತ್ತು ಸಾವಯವ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮೇಳವನ್ನು ಉದ್ಘಾಟಿಸಿದರು. ಜೇನುಮೇಳದಲ್ಲಿ ವಿವಿಧ ಸಂಸ್ಥೆಗಳಿಂದ ಜೇನು ಪ್ರದರ್ಶನ ಹಾಗೂ ಮಾರಾಟದ ಕಾರ್ಯ ಭರದಿಂದ ಸಾಗಿತ್ತು. ಜೇನು ಸಾಕಣೆಯ ಪೆಟ್ಟಿಗೆಗಳ ಪ್ರದರ್ಶನ ಮಳಿಗೆಗಳಲ್ಲಿ ಅವುಗಳ ಸಾಕಣೆಯ ಮಾಹಿತಿ ನೀಡಲಾಯಿತು.
ತೊಡುವೆ ತುಡುವೆ ಜೇನು, ಎಪಿಸ್ ಮೆಲ್ಲಿೆರಾ(ಪಾಶ್ಚಿಮಾತ್ಯ ತಳಿ), ಮುಜಂಟಿ (ನಸುರು ಜೇನು) ಜೇನಿನ ತಳಿಗಳನ್ನು ಸಾಕಬಹುದು. ಆದರೆ ಕೋಲು ಜೇನು, ಹಜ್ಜೇನುಗಳು ಸಾಕಣೆಗೆ ತುಂಬಾ ಅಪಾಯಕಾರಿ. ಮೆಲ್ಲಿೆರಾ ಜೇನು ತಳಿಯನ್ನು ಹೆಚ್ಚಾಗಿ ಕೊಲ್ಕತ್ತಾ, ಗುಜರಾತ್‌ನಲ್ಲಿ ಸಾಕಣೆ ಮಾಡಲಾಗುತ್ತದೆ. ಜೇನು ಸಾಕಣೆಯ ವಿವಿಧ ಪೆಟ್ಟಿಗೆಗಳಾದ ತುಡುವೆ ಜಾತಿಯ ಜೇನು ಕುಟುಂಬದ ಪೆಟ್ಟಿಗೆ, ಮರಿ ಜೇನು ಕುಟುಂಬದ ಪೆಟ್ಟಿಗೆ, ಮೆಲ್ಲಿೆರಾ ಜೇನು ಪೆಟ್ಟಿಗೆ, ಪಿವಿಸಿ ಮಾದರಿ ಜೇನು ಪೆಟ್ಟಿಗೆಯು ಮಳೆಗಾಲದಲ್ಲಿ ಸಹಕಾರಿ. ಮಣ್ಣಿನ ಮಡಿಕೆಯಲ್ಲೂ ಜೇನನ್ನು ಸಾಕಬಹುದು ಎನ್ನುತ್ತಾರೆ ಜೇನು ಅಭಿವೃದ್ಧಿ ತಜ್ಞ ಬಾಲಕೃಷ್ಣ ಭಟ್.
ಜೇನು ಸಾಕಣೆ ಮಾಡುವವರು ಮೊದಲು 2 ಪೆಟ್ಟಿಗೆಗಳಷ್ಟು ಜೇನು ಸಾಕಣೆ ಮಾಡಬೇಕು. ಇದಕ್ಕೆ ಸರಕಾರದಿಂದ ಅಗತ್ಯ ಸಹಾಯಧನವೂ ದೊರೆಯಲಿದೆ. ಜೇನು ಔಷೀಯ ಗುಣವನ್ನು ಹೊಂದಿದ್ದು, ರಾಣಿ ಜೇನುನೊಣ ಮೊಟ್ಟೆ ಇಡುವಾಗ ರಾಜಸೈರಸ ಉತ್ಪತ್ತಿಯಾಗುತ್ತದೆ. ಇದರಿಂದ ಹಲವು ರೋಗಗಳನ್ನು ವಾಸಿ ಮಾಡುವ ಶಕ್ತಿಯನ್ನು ಈ ರಾಜಸೈರಸ ಹೊಂದಿದೆ. ಪ್ರತಿಯೊಬ್ಬರು ಜೇನು ಸಾಕಣೆಯಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ಬಾಲಕೃಷ್ಣರ ಆಶಯ.
ಮೇಳದಲ್ಲಿ 35ಕ್ಕೂ ಅಕ ಮಳಿಗೆಗಳನ್ನು ತೆರೆಯಲಾಗಿತ್ತು. ಜೇನು ಪ್ರದರ್ಶನ ಮತ್ತು ಮಾರಾಟ, ಸಾವಯವ ಕೃಷಿಗೆ ಸಂಬಂಸಿದ ಉತ್ಪನ್ನಗಳ ಪ್ರದರ್ಶನ. ಆಡು ಗೊಬ್ಬರ, ತರಕಾರಿ ಬೀಜಗಳ ಪ್ರದರ್ಶನ, ಮರ ಕತ್ತರಿಸುವ ಉಪಕರಣ, ವಿವಿಧ ಬಗೆಯ ಉಪ್ಪಿನಕಾಯಿ, ತಿಂಡಿತಿನಿಸುಗಳು, ಹಾಪ್‌ಕಿಮ್ಸ್ ಸಂಸ್ಥೆಯಿಂದ ಸಾವಯವ ಕೃಷಿಯ ತರಕಾರಿಗಳ ಪ್ರದರ್ಶನ, ವಾಟರ್ ಗೀಸರ್, ಬಿದಿರಿನ ಅಕ್ಕಿ, ೇಸ್‌ವಾಶ್, ತಂಪು ಪಾನೀಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.







