ಕ್ಯಾನ್ಸರ್ ವಿರುದ್ಧ ಜಾಗೃತಿಗಾಗಿ ‘ಕ್ಯಾನ್ಸರ್‌ಥಾನ್-17’ ಹಾಫ್ ಮ್ಯಾರಥಾನ್
ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ : ವೈ. ಅಬ್ದುಲ್ಲ ಕುಂಞಿ

ಮಂಗಳೂರು, ಫೆ.12: ಕ್ಯಾನ್ಸರ್ ರೋಗ ತಡೆಗಟ್ಟಲು ಯೆನೆಪೊಯ ಸಂಸ್ಥೆಯ ವತಿಯಿಂದ ಶೀಘ್ರದಲ್ಲೇ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಹೇಳಿದರು.
ಯೆನೆಪೊಯ ದಂತ ವೈದ್ಯಕೀಯ ಕಾಲೇಜಿಗೆ 25 ವರ್ಷ ತುಂಬಿದ ಹಿನ್ನ್ನೆಲೆಯಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಸಲುವಾಗಿ ನಗರದ ಫೋರಂ ಫಿಝಾ ಮಾಲ್ ಆವರಣದಲ್ಲಿ ರವಿವಾರ ಆಯೋಜಿಸಲಾದ ‘ಮ್ಯಾರಥಾನ್ ಕ್ಯಾನ್ಸರ್‌ಥಾನ್ 2017’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
60 ವಿದ್ಯಾರ್ಥಿಗಳನ್ನು ಒಳಗೊಂಡು ಒಂದು ಚಿಕ್ಕ ಕಟ್ಟಡದಲ್ಲಿ ಆರಂಭಿಸಲಾದ ಸಂಸ್ಥೆಯು ಇಂದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕ್ಯಾನ್ಸರ್ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶೇ.70ರಷ್ಟು ಮಂದಿ ಗುಣಮುಖರಾಗಿ ಸಂತಸದ ಬದುಕು ಸಾಗಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಪರಿಣಾಮಕಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಯೆನೆಪೊಯ ಅಬ್ದುಲ್ಲ ಕುಂಞಿ ನುಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅಂತಾರಾಷ್ಟ್ರೀಯ ಕ್ರೆಡಾಪಟುಗಳಾದ ಸಹನಾ ಕುಮಾರಿ, ವಂದನಾ ಶಾನುಭೋಗ್, ಫಿಝಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ಾರೂಕ್, ಯೆನೆಪೊಯ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ಡಾ. ಎಂ.ವಿಜಯ್ ಕುಮಾರ್, ರಿಜಿಸ್ಟ್ರಾರ್ ಜಿ.ಶ್ರೀಕುಮಾರ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಚ್. ಶ್ರೆಪತಿ ರಾವ್, ಇಸ್ಲಾಮಿಕ್ ಅಕಾಡಮಿ ಆ್ ಎಜುಕೇಶನ್‌ನ ನಿರ್ದೇಶಕ ಡಾ.ಅಖ್ತರ್ ಹುಸೈನ್, ಫರ್ಹಾದ್ ಯೆನೆಪೊಯ, ಸಂಚಾಲಕ ಶ್ರೀಪತಿ ರಾವ್, ಡಾ. ಯು.ಟಿ. ಇಫ್ತಿಕರ್ ಅಲಿ, ಡಾ. ಶ್ಯಾಮ್ ಭಟ್, ಡಾ. ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾನ್ಸರ್‌ಥಾನ್ 2017ರ ಅಧ್ಯಕ್ಷ ಡಾ. ಹಸನ್ ಸರ್ಫ್ರಾಝ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಸಂದೀಪ್ ಶೆಟ್ಟಿ ವಂದಿಸಿದರು. ಅನುರಾಗ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭ
ಮ್ಯಾರಥಾನ್ ಮತ್ತೆ ನಗರದ ಫೋರಮ್ ಫಿಝಾ ಮಾಲ್ ಆವರಣದಲ್ಲಿ ಸಮಾಪನಗೊಂಡಿತು. ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮ್ಯಾರಥಾನ್‌ನ ವಿಜೇತರಿಗೆ ಪ್ರಶಸ್ತಿ, ಪದಕ ವಿತರಿಸಲಾಯಿತು.
21 ಕಿ.ಮೀ. ಮ್ಯಾರಥಾನ್ 18-21ರ ಮಹಿಳೆಯರ ವಿಭಾಗದಲ್ಲಿ ಜ್ಯೋತಿ(ಪ್ರಥಮ), ಸುಪ್ರಿಯಾ ಮುಂಬೈ(ದ್ವಿತೀಯ), ಸೌಮ್ಯಾ(ತೃತೀಯ), ಅರ್ಚನಾ(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು. 21 ಕಿ.ಮೀ. ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಚಾರ್ಲ್ಸ್ ಕೀನ್ಯಾ(ಪ್ರಥಮ), ಫಿಲಿಪ್ ಕೀನ್ಯಾ(ದ್ವೀತೀಯ), ಅಡ್ವಿನ್ ಕೀನ್ಯಾ(ತೃತೀಯ) ಹಾಗೂ ಕಾಂತಿಲಾಲ್(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು.
10 ಕಿ.ಮೀ. ಮ್ಯಾರಥಾನ್‌ನ ಮಹಿಳಾ(40+) ವಿಭಾಗದಲ್ಲಿ ರಿಶು ಸಿಂಗ್(ಪ್ರಥಮ), ಸುಪ್ರಿತಾ(ದ್ವಿತೀಯ), ಪವಿತ್ರಾ(ತೃತೀಯ), ತೇಜಸ್ವಿನಿ(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು. 10 ಕಿ.ಮೀ.ನ ಪುರುಷರ ವಿಭಾಗದಲ್ಲಿ ಅನಂತ್ ಟಿ.ಎಂ.(ಪ್ರಥಮ), ರಾಬಿನ್(ದ್ವಿತೀಯ), ತಿರುಪತಿ ರಾವ್(ತೃತೀಯ), ಅಭಿಷೇಕ್(4ನೆ ಸ್ಥಾನ) ಪ್ರಶಸ್ತಿ ಪಡೆದುಕೊಂಡರು.
10 ಕಿ.ಮೀ.ನ ಹಿರಿಯ ಮಹಿಳಾ ವಿಭಾಗದಲ್ಲಿ ಜ್ಯೋತಿ ಹರೀಶ್ ರಾವ್(ಪ್ರಥಮ), ರಾಜಶ್ರೀ ನಾಯರ್(ದ್ವೀತಿಯ) ಪ್ರಶಸ್ತಿಗೆ ಭಾಜನರಾದರು. ಹಿರಿಯ ಪುರುಷರ ವಿಭಾಗದಲ್ಲಿ ಸಾಜಿ ರಾಜು(ಪ್ರಥಮ), ನಿಕಿಲ್ ರಾಣೆ(ದ್ವಿತೀಯ) ಸ್ಥಾನ ಪಡೆದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವ ವೈ.ಅಬ್ದುಲ್ಲಾ ಕುಂಞಿ, ಉಪ ಕುಲಪತಿ ಡಾ.ಎಂ.ವಿಜಯಕುಮಾರ್, ಕ್ಯಾನ್ಸರ್ ಮ್ಯಾರಥಾನ್-17ರ ಅಧ್ಯಕ್ಷ ಡಾ.ಹಸನ್ ಸರ್ಫ್ರಾಝ್, ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ವಂದನಾ ಶಾನ್‌ಭಾಗ್, ಸಹನಾಕುಮಾರಿ, ಯು.ಟಿ.ಇಫ್ತಿಹಾದ್, ರಿಜಿಸ್ಟ್ರಾರ್ ಜಿ.ಶ್ರೀಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದ್ಯಮಿ ಬಿ.ಎಂ.ಫಾರೂಕ್, ಅತ್ತಾವರ ಹುಸೈನ್, ಫರ್ಹಾದ್ ಯೆನೆಪೊಯ, ಶ್ಯಾಮ್ ಭಟ್, ಸಂಚಾಲಕ ಶ್ರೀಪತಿ ರಾವ್ ಮೊದಲಾದವರು ಉಪಸ್ಥಿತರಿದ್ದರು.







