ರಾಸಲ್‌ಖೈಮ ಹಾಫ್‌ಮ್ಯಾರಥಾನ್‌ನಲ್ಲಿ ಮಹಿಳಾ ವಿಭಾಗದಲ್ಲಿ ವಿಶ್ವದಾಖಲೆ

ದುಬೈ,ಫೆ.12: ರಾಸಲ್‌ಖೈಮ ಹಾಫ್ ಮ್ಯಾರಥಾನ್‌ನ ಹದಿನೊಂದನೆ ಆವೃತ್ತಿಯಲ್ಲಿ ಕೆನಿಯನ್ ಓಟದ ತಾರೆ ಪೆರಸ್ ಜೆಪ್‌ಚಿರ್‌ಚಿರ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ. 20 ಕಿ.ಮೀ. ದೂರವನ್ನು ಅವರು 65:06 ನಿಮಿಷದಲ್ಲಿ ತಲುಪಿದರು. ಕಳೆದ ವರ್ಷ ಪೆರೆಸ್ ಇಂಟರ್‌ನ್ಯಾಶನಲ್ ಅಸೋಸಿಯೇಶಬ್ ಆಫ್ ಅಥ್ಲೆಟಿಕ್ ಫೆಡರೇಷನ್ ಚಾಂಪಿಯನ್ ಶಿಪ್‌ನ ಚಾಂಪಿಯನ್ ಆಗಿ ಮೂಡಿ ಬಂದಿದ್ದರು.
ಕೆನಿಯದ ಓಟಗಾತಿಫ್ಲಾರೆನ್ಸ್ ಕಿಪ್ಲಾಗಟ್ ಎರಡು ವರ್ಷಗಳ ಹಿಂದೆ ಬಾರ್ಸಿಲೋನದಲ್ಲಿ ಸ್ಥಾಪಿಸಿದ್ದ ವಿಶ್ವದಾಖಲೆಯನ್ನು ಪರೆಸ್ ಮೂರು ನಿಮಿಷ ಕಡಿಮೆ ಅಂತರದಲ್ಲಿ ಓಡಿ ಮುರಿದಿದ್ದಾರೆ.
ರಾಸಲ್‌ಖೈಮ ಹಾಫ್ ಮ್ಯಾರಥಾನ್‌ನಲ್ಲಿ ಎರಡನೆ ಮತ್ತು ಮೂರನೆ ಸ್ಥಾನವನ್ನು ಕೆನಿಯದವರಾದ ಮೆರಿ ಕೈಟಾನಿ, ಜಾಯ್ಸಿ ಲಿನ್ ಜೆಫ್‌ಕೋಸ್ಗಿ ಗಳಿಸಿದ್ದಾರೆ. ಪುರುಷ ವಿಭಾಗದಲ್ಲಿ ಕೆನಿಯದ ಬೆದಾನ್ ಕರೋಕಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅವರು ನಿಗದಿ ದೂರವನ್ನು 59:10 ನಿಮಿಷಗಳಲ್ಲಿ ಓಡಿ ಮುಗಿಸಿದರು. ಇತಿಯೋಪಿಯದ ಯಿಗ್ರೋಂ ದಿಮಲಾಶ್, ಕೆನಿಯದ ಅಗಸಿನ್ ಚೊಗಿ ಎರಡನೆ ಮೂರನೆ ಸ್ಥಾನಗಳಿಸಿದರು ಎಂದು ವರದಿ ತಿಳಿಸಿದೆ.





