ವಿದ್ಯಾರ್ಥಿಗಳಿಗೆ ಕೊಲೆ ಬೆದರಿಕೆ ಹಾಕಿದ ಕಾಲೇಜಿನ ಅಧ್ಯಕ್ಷ

ತೃಶೂರ್.ಫೆ.12: ಪಾಂಬಡಿ ನೆಹರೂ ಕಾಲೇಜಿನ ವಿಷಯದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಕೊಲ್ಲುವುದಾಗಿ ನೆಹರೂ ಗ್ರೂಪ್ ಅಧ್ಯಕ್ಷ ಪಿ.ಕೃಷ್ಣದಾಸ್ ಬೆದರಿಕೆಹಾಕಿದ್ದಾರೆಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಅದರೆ ಇದು ಆಧಾರರಹಿತ ಎಂದು ಕೃಷ್ಣದಾಸ್ ಹೇಳಿದ್ದಾರೆ. ಜಿಷ್ಣು ಅಸಹಜ ಸಾವಿನ ನಂತರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಕೊಂದು ಹಾಕುವುದಾಗಿ ಕೃಷ್ಣದಾಸ್ ಹೇಳಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಕರೆಯಿಸಿಕೊಂಡು ಅಧ್ಯಕ್ಷ ಬೆದರಿಕೆಯೊಡ್ಡಿದ್ದಾರೆ. ನಿಮ್ಮಮಕ್ಕಳನ್ನು ಕಾಲೇಜಿನಲ್ಲಿ ಭಾರೀ ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಇನ್ನು ನೀವು ಅವರನ್ನು ಕಾಣಲು ಯಾವುದಾದರೂ ಶವಾಗಾರಕ್ಕೋ ಆಸ್ಪತ್ರೆಗೋ ಹೋಗಬೇಕಾದೀತು. ಅದಕ್ಕೆ ಬೇಕಾದ ಶಕ್ತಿ, ಆರ್ಥಿಕ ಸಾಮರ್ಥ್ಯ ತನಗಿದೆ ಎಂದು ಎಲ್ಲರೂ ಅರಿತರೆ ಒಳ್ಳೆಯದೆಂದು ಪ್ರತಿಭಟಿಸಿದ ಹೆತ್ತವರಿಗೆ ಕೃಷ್ಣದಾಸ್ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೃಷ್ಣದಾಸ್ ವಿರುದ್ಧ ಡಿಜಿಪಿ ಮತ್ತು ಕೇರಳ ಶಿಕ್ಷಣ ಸಚಿವರಿಗೆ ದೂರು ನೀಡಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಆದರೆ ನಾನು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿಲ್ಲ. ಪೋಷಕರು ಆಯ್ಕೆ ಮಾಡಿದ ಸಮಿತಿ ಈ ಕಾಲೇಜಿನ ವಿಷಯಗಳನ್ನು ನಿಯಂತ್ರಿಸುತ್ತಿದೆ. ವಿದ್ಯಾರ್ಥಿಗಳು ಆರೋಪಿಸುವ ದಿವಸಗಳಲ್ಲಿ ತಾನುಕಾಲೇಜಿನಲ್ಲಿಯೇ ಇರಲಿಲ್ಲ. ತನ್ನ ವಿರುದ್ಧ ದೂರು ನೀಡುವ ವಿದ್ಯಾರ್ಥಿಗಳ ಕ್ರಮವನ್ನು ತಾನುಸ್ವಾಗತಿಸುತ್ತೇನೆಂದು ಅಧ್ಯಕ್ಷ ಕೃಷ್ಣದಾಸ್ ಹೇಳಿದರೆಂದು ವರದಿ ತಿಳಿಸಿದೆ.





