ವಿದ್ಯಾರ್ಥಿನಿಯ ಮುಖಕ್ಕೆ ಮಸಿ ಬಳಿದ ಅಧ್ಯಾಪಕ
ಮುಖಕ್ಕೆ ಪೌಡರ್ ಹಚ್ಚಿದ್ದೇ ಅಪರಾಧ !

ಮಟ್ಟಾಂಚೇರಿ,ಫೆ.12: ಅಧ್ಯಾಪಕರೊಬ್ಬರು, ಪೌಡರ್ ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿನಿಯ ಮುಖಕ್ಕೆ ಕಪ್ಪುಮಸಿ ಬಳಿದು ಬಿಸಿಲಲ್ಲಿ ನಿಲ್ಲಿಸಿದ್ದಾರೆ. ಮಟ್ಟಾಂಚೇರಿ ಆಸಿಯಾ ಬಾಯಿ ಶಾಲೆಯಲ್ಲಿ ಘಟನೆ ನಡೆದಿದ್ದು, ಸಫಾಮರ್ವಾ ಎನ್ನುವ ಆರನೆ ತರಗತಿಯ ವಿದ್ಯಾರ್ಥಿನಿಗೆ ಅಧ್ಯಾಪಕ ಈ ವಿನೂತನ ಶಿಕ್ಷೆ ನೀಡಿದ್ದಾರೆ.
ಬಿಸಿಲಲ್ಲಿ ನಿಂತು ನಿಶ್ಶಕ್ತಳಾದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆದಾಖಲಿಸಲಾಗಿದೆ. ಮುಖಕ್ಕೆ ಕಪ್ಪು ಮಸಿ ಬಳಿದ ಬಳಿಕ ಮಧ್ಯಾಹ್ನ 20 ನಿಮಿಷ ಅಧ್ಯಾಪಕ ಬಿಸಿಲಲ್ಲಿ ನಿಲ್ಲಿಸಿದರೆಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ನಂತರ ಕ್ಲಾಸಿಗೆ ಹೋಗಲುಬಿಟ್ಟರೂ ಮುಖ ತೊಳೆಯಲು ಬಿಡಲಿಲ್ಲ. ಬಾಲಕಿಯ ಹೆತ್ತವರು ವಿದೇಶದಲ್ಲಿದ್ದಾರೆ. ಪೊಲೀಸರು ಅಧ್ಯಾಪಕನ ವಿರುದ್ಧ ಕೇಸು ದಾಖಲಿಸಿದ್ದಾರೆ. ಆದರೆ ತಾನು ಕ್ಲಾಸಿಗೆ ಪೌಡರ್ ಹಾಕಿ ಬಂದದ್ದಕ್ಕಾಗಿ ವಿದ್ಯಾರ್ಥಿನಿಗೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು ಇನ್ನೇನು ಮಾಡಿಲ್ಲ ಎಂದು ಅಧ್ಯಾಪಕರು ಸ್ಪಷ್ಟೀಕರಣ ನೀಡಿದ್ದಾರೆಂದು ಅಧ್ಯಾಪಕರು ಹೇಳಿದರು ಎಂದು ವರದಿ ತಿಳಿಸಿದೆ.
Next Story





