ರಾಜ್ಯ ಗೇರು ನಿಗಮದ ಅಧ್ಯಕ್ಷರಿಗೆ ಸನ್ಮಾನ

ಸುಳ್ಯ, ಫೆ.12: ತಾಲೂಕಿನ ಎಣ್ಮೂರಿನಲ್ಲಿ ನಡೆದ ಉರೂಸ್ ಸಮಾರಂಭಕ್ಕೆ ಶನಿವಾರ ಆಗಮಿಸಿದ್ದ ರಾಜ್ಯ ಗೇರು ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್‌ರನ್ನು ಮಸೀದಿ ಕಮಿಟಿ ಮತ್ತು ಉರೂಸ್ ಕಮಿಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಣ್ಮೂರು ಮಸೀದಿ ಕಮಿಟಿಯ ಗೌರವ ಅಧ್ಯಕ್ಷ ಹಾಜಿ ಐ.ಕುಂಞಿಪಳ್ಳಿ, ಅಧ್ಯಕ್ಷ ಇಸ್ಮಾಯೀಲ್ ಪಡ್ಪಿನಂಗಡಿ, ಉರೂಸ್ ಕಮಿಟಿ ಅಧ್ಯಕ್ಷ ಡಿ. ಅಬ್ದುಲ್ಲ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಸುಳ್ಯ ತಾಪಂ ಸದಸ್ಯ ಗಫೂರ್, ಇಫಾರತ್ ಬಂಟ್ವಾಳ, ಮಸೀದಿಯ ಖತೀಬ್ ಹಸನ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
Next Story





