ಜಯನಗರದಲ್ಲಿ ಧಾರ್ಮಿಕ ಮತ ಪ್ರಭಾಷಣ ಮತ್ತು ಅನುಸ್ಮರಣೆ ಕಾರ್ಯಕ್ರಮ

ಸುಳ್ಯ,ಫೆ.12: ಹುಬ್ಬರ್ರಸೂಲ್ ಯಂಗ್‌ಮೇನ್ಸ್ ಅಸೋಸಿಯೇಶನ್ ಜಯನಗರ ಇದರ ಆಶ್ರಯದಲ್ಲಿ 2ನೇ ವರ್ಷದ ಧಾರ್ಮಿಕ ಮತ ಪ್ರಭಾಷಣ ಹಾಗೂ ತಾಜುಲ್ ಉಲಮಾ ಮತ್ತು ಶಂಸುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಜಯನಗರ ಶಾಲಾ ಬಳಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ನವಾರ್ ಪಂಡಿತ್‌ರವರು ಅಧ್ಯಕ್ಷತೆ ವಹಿಸಿದ್ದರು. ಅಸೈಯದ್ ಕುಂಞಿಕೋಯ ತಂಙಳ್ ನಾವೂರುರವರು ಕಾರ್ಯಕ್ರಮ ಉದ್ಘಾಟಿಸಿ, ದುವಾಃ ನೆರವೇರಿಸಿದರು.
ಮುಖ್ಯ ಪ್ರಭಾಷಣಗಾರರಾಗಿ ಪ್ರಖ್ಯಾತ ವಾಗ್ಮಿ ಇಸ್ಲಾಂನಲ್ಲಿ ಯುವತ್ವದ ಮಹತ್ವದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಸೈಯದ್ ಝೈನುಲ್ ಅಬಿದ್ ತಂಙಳ್ ಜಯನಗರ, ಸ್ಥಳೀಯ ಮಸೀದಿ ಮದ್ರಸ ಅಧ್ಯಕ್ಷ ಅಝೀರ್ ಬಿ.ಎಂ., ಎಸ್.ಎ. ಇಬ್ರಾಹಿಂ, ನ.ಪಂ. ಸದಸ್ಯ ಉಮ್ಮರ್, ಸುಳ್ಯ ಎಸ್.ಡಿ.ಪಿ.ಐ. ಅಧ್ಯಕ್ಷ ಅಬ್ದುಲ್ ಕಲಾಂ, ಪೈಚಾರ್ ಬದ್ರಿಯಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಪಿ.ಕೆ. ಆರ್.ಬಿ. ಬಶೀರ್, ಅಬ್ದುಲ್ ಜಬ್ಬಾರ್ ಜಯನಗರ, ಓ.ಎಸ್.ಎ. ಅಧ್ಯಕ್ಷ ರಶೀದ್ , ಸದರ್ ಮುಅಲ್ಲಿಂ ಮಹಮ್ಮದ್ ಅಲಿ ಸಹದಿ ಉಪಸ್ಥಿತರಿದ್ದರು.
ಮೊಗರ್ಪಣೆ ಮಸೀದ್ ಮುದರಿಸ್ ಅಬ್ದುಲ್ ರವೂಫ್ ಸಖಾಪಿ ಪ್ರಾಸ್ತಾವಿಕ ಮಾತನಾಡಿದರು. ಇತ್ತಿಚೆಗೆ 6 ಬಡ ಕುಟುಂಬದ ನವಜೋಡಿಗಳಿ ವಿವಾಹ ನಡೆಸಿಕೊಟ್ಟ ಹಾಜಿ.ಜಿ. ಇಬ್ರಾಹಿಂರವರನ್ನು ಸಂಸ್ಥೆಯ ಪರವಾಗಿ ಶಾಲು ಹೊದಿಸಿ ಗೌರವಿಸಲಾಯಿತು. ಬಶೀರ್ ಸಖಾಫಿ ಸ್ವಾಗತಿಸಿ, ವಂದಿಸಿದರು. ಸಂಶುದ್ಧೀನ್ ಕಾರ್ಯಕ್ರಮ ನಿರೂಪಿಸಿದರು.





