ಕಾಶ್ಮೀರದಲ್ಲಿ ಗೋಲಿಬಾರಿಗೆ ಓರ್ವ ಬಲಿ, 15 ಮಂದಿಗೆ ಗಾಯ

ಶ್ರೀನಗರ, ಫೆ.12: ಕಾಶ್ಮೀರದ ಕುಲ್ಗಾಂನಲ್ಲಿ ನಾಲ್ವರು ಶಂಕಿತ ಉಗ್ರರ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆಗಿಳಿದ ನಾಗರಿಕರನ್ನು ಚದುರಿಸಲು ಭದ್ರತಾಪಡೆಗಳು ಗುಂಡು ಹಾರಿಸಿದಾಗ ಗುಂಡೇಟಿಗೆ ಸಿಲುಕಿ ಯುವಕನೊಬ್ಬನು ಮೃತಪಟ್ಟು, ಹದಿನೈದು ಮಂದಿ ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಸಿರ್ಗುಫ್ವಾರದ ನಿವಾಸಿ ಇಪ್ಪತ್ತನಾಲ್ಕರ ಹರೆಯದ ಮುಸ್ತಾಕ್ ಇಬ್ರಾಹಿಂ ಎಂಬವರು ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಬಲಿಯಾಗಿದ್ದಾರೆ. ಗಾಯಗೊಂಡ ಹದಿಮೂರು ಮಂದಿಯನ್ನು ಅನಂತನಾಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿ, ಪೆಲೆಟ್ ಮತ್ತು ಗುಂಡು ಹಾರಿಸಿ ಪ್ರತಿಭಟನೆಕಾರರನ್ನು ಚದುರಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





