ವೀರಶೈವ ಲಿಂಗಾಯುತ ವೇದಿಕೆಯಿಂದ ಚಿಂತನಾ ಸಮಾವೇಶ
ಮಂಗಳೂರು,ಫೆ.12: ಧರ್ಮಗಳ ಆಚರಣಾ ಶೈಲಿಯಲ್ಲಿ ಇಂದು ಬದಲಾವಣೆಗಳು ಕಂಡುಬರುತ್ತಿದೆ. ಇದರಿಂದ ಧರ್ಮದ ಮೂಲ ನೆಲೆಗಟ್ಟಿಗೆ ಯಾವುದೇ ತೊಂದರೆಯಾಗಬಾರದು. ವೀರಶೈವರು ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಮನಪಾ ಮೇಯರ್ ಹರಿನಾಥ್ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯುತ ಯುವ ವೇದಿಕೆಯ ವತಿಯಿಂದ ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ರವಿವಾರ ನಡೆದ ಚಿಂತನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ರೋಣ ಗುಲಗುಂಜಿ ಮಠದ ಗುರುಪಾದ ಮಹಾಸ್ವಾಮಿ ಆಶೀರ್ವಚನ ನೀಡಿದರು. ವೀರಶೈವ ಲಿಂಗಾಯುತ ಯುವ ವೇದಿಕೆಯ ಪ್ರಶಾಂತ್ ಕಲ್ಲೂು ಅಧ್ಯಕ್ಷತೆ ವಹಿಸಿದ್ದರು.
ಕಾರ್ಪೊರೇಟರ್ ರಾಧಾಕೃಷ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಬಿಜೆಪಿ ನಗರ ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್, ಮುಲ್ಕಿ ನ.ಪಂ.ಅಧ್ಯಕ್ಷ ಸುನೀಲ್ ಆಳ್ವ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ ಶುಭಹಾರೈಸಿದರು.
ಯುವ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕವನಾ, ರಾಜ್ಯ ಸಂಚಾಲಕ ಶಿವಪ್ಪ ಪಚ್ಚನಾಡಿ, ಗೌರವಾಧ್ಯಕ್ಷ ಚೆನ್ನಮಲ್ಲಯ್ಯ ಹಿರೇಮಠ, ಅಧ್ಯಕ್ಷ ಮಂಜುನಾಥ ಕಂಬಾರ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಹಿರೇಮಠ ಪ್ರಾಸ್ತಾವಿಸಿದರು. ಕಾರ್ಯದರ್ಶಿ ಮಹಾಂತೇಶ ನಾಗಶೆಟ್ಟಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರ್ವಹಿಸಿದರು.







