ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ 34ನೆ ವಾರ್ಷಿಕೋತ್ಸವ ಸಮಾರೋಪ

ಮುಲ್ಕಿ, ಫೆ. 12: ಮುಸ್ಲಿಂ ಸಮುದಾಯ ಏಳಿಗೆಗೆ ಪಣ ತೊಟ್ಟು ಮುಂದೆ ಬರಬೇಕಿದ್ದ ಮುಸ್ಲಿಂ ಯುವ ಸಮೂಹ ಮಾದಕ ವ್ಯಸನಗಳ ದಾಸರಾಗುತ್ತಿರುವುದು ದುರಾದೃಷ್ಟಕರ ಎಂದು ಸಜಿಪ ಕೇಂದ್ರ ಜುಮಾ ಮಸೀದಿಯ ಖತೀಬ್ ಫೈಝಿ ಹೇಳಿದರು.
ಅವರು, ಶನಿವಾರ ಬೊಳ್ಳೂರು ಜುಮಾ ಮಸೀದಿಯ ಅಂಗ ಸಂಸ್ಥೆ ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ 34ನೆ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಪ್ರಭಾಷಣದಲ್ಲಿ ಮಾತನಾಡುತ್ತಿದ್ದರು.
ಮಾದಕ ವ್ಯದಾನದಲ್ಲಿ ದ.ಕ. ಜಿಲ್ಲೆ ಎರಡನೆ ಸ್ಥಾನದಲ್ಲಿದೆ. ಫೆವಿಕಿಕ್ ಗಮ್ ಗೆ ಬೆಂಕಿ ಹಚ್ಚಿ ಅಸರಿಂದಲೂ ಅಮಲು ಸ್ವೀಕರಿಸುವ ಪ್ರವೃತ್ತಿಯ ವರೆಗೂ ಯುವ ಸಮುದಾಯ ಮುಂದು ವರಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಎಸ್ ಡಿ ಪಿ ಐ ರಾಜ್ಯ ಸಮಿತಿ ಅದಸ್ಯ ಅನ್ವರ್ ಸಾದಾತ್, ಸಮುದಾಯದ ಮುಖಂಡರ ದುರ್ಬಲ ನಿರ್ಧಾರಗಳಿಂದ ಸಮುದಾಯ ಹಿನ್ನಡೆ ಅನುಭವಿಸುವಂತಾಗಿದೆ. ಇಸ್ಲಾಂ ಧರ್ಮದ ಬಗ್ಗೆ ಅವಹೇಳನಗಳು ಮತ್ತು ಆ ಪ್ರವೃತ್ತಿಯಲ್ಲಿ ತೊಡಗಿರುವ ಜನರಿಂದ ಇಸ್ಲಾಂ ಮತ್ತಷ್ಟು ಗಟ್ಟಿ ಹಾಗೂ ವಿಸ್ತಾರ ವಾಗಿ ಬಡಳೆಯುತ್ತಿದೆ ಎಂದರು.
ಸಮಾರಂಭವನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ವಹಿಸಿದ್ದರು.
ಕೇರಳದ ಅಸೈಯ್ಯದ್ ನಜ್ಮುದ್ದೀನ್ ಪೂಕೋಯ ತಂಞಳ್ ದುವಾ ಆಶೀರ್ವಚನ ಗೈದರು.
ಅರಣ್ಯ ಸಚಿವ ರಮಾನಾಥ ರೈ, ವಿದಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕರಾದ ಅಭಯಚಂದ್ರ ಜೈನ್, ಮೊಯ್ದೀನ್ ಬಾವಾ, ರಾಜ್ಯ ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಎಂ.ಎ. ಗಫೂರ್, ಮೂಡಾ ಸದಸ್ಯ ವಸಂತ್ ಬೆರ್ನಾರ್ಡ್, ಬಶೀರ್ ಕಲ್ಲಾಪು,
ಇಎಂ. ಅಬ್ದುಲ್ಲಾ ಮದನಿ ಪಾತೂರು, ಕೆ.ಎಚ್. ಹಸನ್ ಮುಸ್ಲಿಯಾರ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಹಮೀದ್ ಸಾಗ್ , ಬಶೀರ್ ಸಾಗ್ ಮತ್ತಿತರರಿದ್ದರು.
ಇದೇ ವೇಳೆ ಬೊಳ್ಳೂರು ಜುಮಾ ಮಸೀದಿಯಲ್ಲಿ ಖತೀಬರಾಗಿ 30 ವರ್ಷಗಳ ಸುದೀರ್ಘ ಕಾಲ ಸೇವೆ ಗೈದ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ಅವರನ್ನು ಹಾಗೂ ಸ್ಥಳೀಯ ಸಾಧಕರನ್ನು ನಜ್ಮುದ್ದೀನ್ ತಂಞಳ್ ನಸ್ಮಾನಿಸಿ ಗೌರವಿಸಿದರು.







