14 ನೆ ವಿದ್ಯಾರ್ಥಿ ಫೆಸ್ಟ್ - 2017

ಸುರತ್ಕಲ್, ಫೆ. 12: ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ರಿ. ಇವುಗಳ ಜಂಟಿ ಆಶ್ರಯದಲ್ಲಿ ರೇಂಜ್ ಮಟ್ಟದ 14 ನೆ ವಿದ್ಯಾರ್ಥಿ ಫೆಸ್ಟ್ - 2017 ರವಿವಾರ ಇಡ್ಯಾ ಖಿಲ್ ರಿಯಾ ಮಸೀದಿಯ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೊಳ್ಳೂರು ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಮಾತ್ರ ಉಜ್ವಲ ಭವಿಷ್ಯ ಪಡೆಯಲು ಸಾದ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ನ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ ವಹಿಸಿದ್ದರು. ಇಡ್ಯಾ ಖಿಲ್ ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಹಾಜೀ ಬಾಪುಂಞಿ ಧ್ವಜಾರೋಹಣಗೈದರು.ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶಾಸಕ ಮೊಯ್ದೀನ್ ಬಾವಾ, ದ.ಕ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಹಾಜೀ ಐ. ಮೊಯ್ದೀನ್, ಇಡ್ಯಾ ಖಿಲ್ ರಿಯಾ ವಿದ್ಯಾ ಸಮಿತಿಯ ಅಧ್ಯಕ್ಷ ಐ.ಎಚ್. ಮೊಯ್ದೀನ್, ಸುರತ್ಕಲ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಐ. ಯಾಕೂಬ್, ಬದ್ರುದ್ದೀನದ ದಾರಿಮಿ, ಆಸೀಫ್ ಹನೀಫಿ, ಪಿಡಬ್ಯುಡಿ ಗುತ್ತಿಗೆದಾರ ಎಂ.ಜಿ. ಹುಸೈನ್, ಹನೀಫ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.





