ಸ್ವಉದ್ಯೋಗದಿಂದ ನಿರುದ್ಯೋಗ ಸಮಸ್ಯೆ ಪರಿಹಾರ: ಸಾಹು

ಉಡುಪಿ, ಫೆ.12: ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಬಹಳ ದೊಡ್ಡ ಸವಾಲು ಆಗಿರುವುದರಿಂದ ಸರಕಾರ ಜಾರಿಗೆ ತಂದಿರುವ ವಿವಿಧ ಯೋಜನೆ ಗಳ ಪ್ರಯೋಜನ ಪಡೆದು ಸ್ವಉದ್ಯೋಗ ಆರಂಭಿಸುವತ್ತ ಹೆಚ್ಚಿನ ಗಮನ ಕೊಡಬೇಕು ಎಂದು ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಅನದಿ ಚರಣ್ ಸಾಹು ಹೇಳಿದ್ದಾರೆ.
ಉಡುಪಿ ಮಹಿಳಾ ಉದ್ಯಮಿಗಳ ವೇದಿಕೆ(ಪವರ್) ವತಿಯಿಂದ ಇಂದು ಉಡುಪಿ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸ ಲಾದ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತ ನಾಡುತಿದ್ದರು.
ಉದ್ಯಮ ಆರಂಭಿಸಲು ಸರಕಾರ ಶೇ.9ರ ಬಡ್ಡಿ ದರದಲ್ಲಿ ಸಾಲ ನೀಡು ತ್ತಿದೆ. ಈ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಆದರೆ ರಾಷ್ಟ್ರದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಅವರ ಕೊಡುಗೆ ಕಡಿಮೆ. ಜಗತ್ತಿನ ವಿವಿಧ ದೇಶಗಳಲ್ಲಿ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಮಹಿಳೆಯರ ಪ್ರಮಾಣ ಕನಿಷ್ಠ ಶೇ.2ರಿಂದ ಗರಿಷ್ಠ ಶೇ.40ರಷ್ಟು ಎಂಬುದು ಸಮೀಕ್ಷೆ ತಿಳಿಸುತ್ತದೆ ಎಂದರು.
ಏಷ್ಯನ್ ಔದ್ಯಮಿಕ ಪ್ರೋತ್ಸಾಹ ಕೇಂದ್ರದ ವಿಶ್ವಸ್ಥ ನಿರ್ದೇಶಕಿ ಮಧುರಾ ಛತ್ರಪತಿ ಸಮ್ಮೇಳನ ಉದ್ಘಾಟಿಸಿದರು. ಔದ್ಯಮಿಕ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆಯ ಸಾಕಷ್ಟಿದ್ದು, ಅದರ ನಿಖರ ಅಂಕಿ ಅಂಶ ಇನ್ನು ಸಿಕ್ಕಿಲ್ಲ. ಅದಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ವಿವಿಧ ಇಲಾಖೆಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ನಿಟ್ಟೆ ಕೆ.ಎಸ್.ಹೆಗ್ಡೆ ಆಡಳಿತ ನಿರ್ವಹಣಾ ಸಂಸ್ಥೆಯ ಕಾರ್ಪೋರೇಟ್ ಕಾರ್ಯ ಕ್ರಮದ ಡೀನ್ ಡಾ.ಎ.ಪಿ.ಆಚಾರ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಸಾಧಕರಿಗೆ ಬ್ಯುಸಿನೆಲ್ ಎಕ್ಸಲೆನ್ಸ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪವರ್ ಸಂಸ್ಥೆಯ ಅಧ್ಯಕ್ಷೆ ಸರಿತಾ ಸಂತೋಷ್, ಕಾರ್ಯ ದರ್ಶಿ ಶ್ರುತಿ ಶೆಣೈ, ಕಾರ್ಯಕ್ರಮ ಸಂಯೋಜಕಿ ರೀತು ಚೌದರಿ, ಕೋಶಾ ಧಿಕಾರಿ ನಿವೇದಿತಾ ಶೆಟ್ಟಿ, ಪುಷ್ಪಾ ರಾವ್, ರೇಣು ಜಯರಾಮ್ ಮೊದಲಾದ ವರು ಉಪಸ್ಥಿತರಿದ್ದರು. ಡಾ.ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.







