‘ಸಾಮಾಜಿಕ ಜಾಲ ತಾಣ ಬಳಸುವಾಗ ಕಾನೂನು ಪಾಲನೆ ಅಗತ್ಯ’

ಉಡುಪಿ, ಫೆ.12: ದೇಶದ ಪ್ರತಿಯೊಬ್ಬ ಪ್ರಜೆಯು ಕೂಡ ಕಾನೂನನ್ನು ಪಾಲಿಸಬೇಕು. ಪ್ರಸ್ತುತ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅರಿವನ್ನು ಹೊಂದಿ ರಬೇಕು. ಸಾಮಾಜಿಕ ಜಾಲ ತಾಣಗಳನ್ನು ಬಳಸುವಾಗ ಕಾನೂನು ಪಾಲನೆ ಅತ್ಯಗತ್ಯ. ಫೇಸ್‌ಬುಕ್, ವಾಟ್ಸಪ್‌ಗಳನ್ನು ಉಪಯೋಗಿಸಬೇಕು. ಆದರೆ ಅದರ ದುರುಪಯೋಗ ಆಗಬಾರದು ಎಂದು ಉಡುಪಿಯ ನ್ಯಾಯವಾದಿ ಅಖಿಲ್ ಬಿ. ಹೆಗ್ಡೆ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಮಾನವ ಹಕ್ಕುಗಳ ಘಟಕದ ವತಿಯಿಂದ ಇತ್ತೀಚೆಗೆ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ನೀಡಿದರು. ಭಾರತೀಯ ದಂಡ ಸಂಹಿತೆ, ಮಹಿಳಾ ದೌರ್ಜನ್ಯ ಕಾಯಿದೆ, ಸೈಬರ್ ಕ್ರೈಮ್ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಇತ್ಯಾದಿಗ ಕುರಿತು ವಿವರವನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿದರು. ವಿದ್ಯಾರ್ಥಿ ಮಧು ಸೂದನ್ ಭಟ್ ವಂದಿಸಿದರು. ಸುಮನಸ ಭಟ್ ಕಾರ್ಯಕ್ರಮ ನಿರೂಪಿಸಿದರು.
Next Story





