ವೀಸಾ ಸಮಸ್ಯೆ: ಐಟಿ ಕಂಪನಿಗಳಿಂದ ಮಾಹಿತಿ ಕೇಳಿದ ಸರಕಾರ

ಹೊಸದಿಲ್ಲಿ,ಫೆ.12: ಅಮೆರಿಕದ ವೀಸಾ ವಿಷಯದಲ್ಲಿ ಉಂಟಾಗಿರುವ ಕಳವಳಗಳನ್ನು ತಾನು ನೂತನ ಟ್ರಂಪ್ ಆಡಳಿತದೊಂದಿಗೆ ಪರಿಣಾಮಕಾರಿಯಾಗಿ ಕೈಗತ್ತಿಕೊಳ್ಳುವಂತಾಗಲು ವಿವರವಾದ ವ್ಯವಹಾರ ಮಾಹಿತಿಗಳನ್ನು ಸಲ್ಲಿಸುವಂತೆ ಕೇಂದ್ರ ಸರಕಾರವು ಉದ್ಯಮ ರಂಗಕ್ಕೆ, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಸೂಚಿಸಿದೆ.
ಕಳೆದ ವಾರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯು ವೀಸಾಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದ್ದು, ನಾಸ್ಕಾಂನಂತಹ ಉದ್ಯಮ ರಂಗದ ಸಂಸ್ಥೆಗಳು ಅಗತ್ಯ ಮಾಹಿತಿಗಳನ್ನು ಕ್ರೋಢೀಕರಿಸಬೇಕು ಮತ್ತು ಅಮೆರಿಕದ ವೀಸಾ ವ್ಯವಸ್ಥೆಯಲ್ಲಿ ಉದ್ದೇಶಿತ ಬದಲಾವಣೆಗಳಿಂದ ಸಂಭಾವ್ಯ ಪರಿಣಾಮಗಳನ್ನು ಗುರುತಿಸಬೇಕು ಎಂದು ಸೂಚಿಸಲಾಗಿದೆ.
Next Story





