ಉಡುಪಿ: ಶಾಲಾ ಕಾಲೇಜಿಗೆ ರಜೆ ಇಲ್ಲ
ಉಡುಪಿ, ಫೆ.12: ಉಡುಪಿ ಜಿಲ್ಲೆ ಬಂದ್ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿಲ್ಲ. ಆದರೆ ಪರಿಸ್ಥಿತಿ ನೋಡಿ ಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ಆಯಾ ಶಾಲೆಗಳ ಮುಖ್ಯೋ ಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ ಎಂದು ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.
ಸಿಟಿ ಬಸ್ ಬಂದ್ ಇಲ್ಲ
ಉಡುಪಿ ಜಿಲ್ಲೆ ಬಂದ್‌ಗೆ ಕರೆ ನೀಡಿದರೂ ಉಡುಪಿ ನಗರದಲ್ಲಿ ಸಿಟಿ ಬಸ್‌ಗಳು ಯಥಾಸ್ಥಿತಿಯಂತೆ ನಾಳೆಯೂ ಸಂಚರಿಸಲಿದೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಉಡುಪಿ ರಿಕ್ಷಾ ಚಾಲಕ ಮತ್ತು ಮಾಲಕರು, ನಾಳೆ ಯಾವುದೇ ರೀತಿಯಲ್ಲಿ ಬಂದ್ ಆಚರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಖಾಸಗಿ ಬಸ್ ಬಂದ್
ಟೋಲ್ ಸಂಗ್ರಹ ವಿರುದ್ಧದ ನಾಳಿನ ಬಂದ್‌ಗೆ ಕೆನರಾ ಬಸ್ ಮಾಲಕರ ಸಂಘ ಬೆಂಬಲ ಸೂಚಿಸಿದೆ ಎಂದು ಸಂಘದ ಉಪಾಧ್ಯಕ್ಷ ದುರ್ಗಾಪ್ರಸಾದ್ ತಿಳಿಸಿದ್ದಾರೆ.
ಖಾಸಗಿ ಬಸ್‌ಗಳು ನಾಳೆ ರಸ್ತೆಗೆ ಇಳಿಯಲ್ಲ. ಮಂಗಳೂರು- ಉಡುಪಿ ಮತ್ತು ಉಡುಪಿ -ಕುಂದಾಪುರ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.







