ಬೈಕಿನಿಂದ ಬಿದ್ದು ಮಹಿಳೆ ಮೃತ್ಯು
ಬ್ರಹ್ಮಾವರ, ಫೆ.12: ಉಪ್ಪೂರು ಗ್ರಾಮದ ಸಾಲ್ಮಾರ ರೈಲ್ವೆ ಓವರ್ ಬ್ರಿಡ್ಜ್ ಸಮೀಪ ಬೈಕಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಫೆ.11 ರಂದು ನಡೆದಿದೆ.
ಮೃತರನ್ನು ಕೆ.ಗೋವಿಂದ ಭಟ್ ಎಂಬವರ ಪತ್ನಿ ಶ್ರೀಲತಾ ಭಟ್ ಎಂದು ಗುರುತಿಸಲಾಗಿದೆ. ಇವರು ತನ್ನ ಪತಿಯ ಬೈಕಿನಲ್ಲಿ ಬೆಳಗ್ಗೆ 9ಗಂಟೆಗೆ ಕೊಳಲ ಗಿರಿ ಕಡೆಯಿಂದ ತೆಂಕಬೆಟ್ಟು ಕಡೆಗೆ ಹೋಗುತ್ತಿದ್ದಾಗ ಗೋವಿಂದ ಭಟ್ ಬೈಕ್ ಒಮ್ಮೆಲೇ ಬ್ರೇಕ್ ಹಾಕಿದರು.
ಅದರ ಪರಿಣಾಮ ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಶ್ರೀಲತಾ ಭಟ್ ಆಯ ತಪ್ಪಿರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವು ಮಧ್ಯಾಹ್ನ 1.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





