ನಭಾ ಜೈಲು ಬ್ರೇಕ್ ಪ್ರಕರಣ; ಆರೋಪಿ ಸೆರೆ

ಚಂಡಿಗಢ , ಫೆ.12: ಪಂಜಾಬ್ ನ ನಭಾ ಜೈಲು ಬ್ರೇಕ್ ಪ್ರಕರಣದ ಕೋ ಮಾಸ್ಟರ್ ಮೈಂಡ್ ಗುರುಪ್ರೀತ್ ಸೆಕೋನ್ ಎಂಬಾತನನ್ನು ಮೊಗಾದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸೆಕೋನ್ ಹಾಂಕಾಂಗ್‌ಗೆ ಪರಾರಿಯಾಗುವ ಯತ್ನದಲ್ಲಿದ್ದಾಗ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. ಪಾಸ್ ಪೋರ್ಟ್‌ನಲ್ಲಿ ಹರಿಯಾಣ ನಿವಾಸಿಯೆಂದು ತೋರಿಸಲಾಗಿದೆ. ಆತನ ಬಳಿ ಗುಜರಾತ್, ದಿಲ್ಲಿ, ಮತ್ತು ಇತರ ರಾಜ್ಯಗಳ ನಿವಾಸಿ ಎಂದು ಬಿಂಬಿಸುವ ಉದ್ದೇಶಕ್ಕಾಗಿ ಮುದ್ರಿಸಲಾದ ವಿಸಿಟಿಂಗ್ ಕಾರ್ಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Next Story





