ದಕ್ಷಿಣ ಆಫ್ರಿಕ ವಿರುದ್ಧ ಟ್ವೆಂಟಿ-20: ಟೇಲರ್ ಔಟ್

ವೆಲ್ಲಿಂಗ್ಟನ್, ಫೆ.12: ಮುಂದಿನ ವಾರ ನಡೆಯಲಿರುವ ದಕ್ಷಿಣ ಆಫ್ರಿಕ ವಿರುದ್ಧದ ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಕ್ಕೆ 14 ಸದಸ್ಯರುಗಳನ್ನೊಳಗೊಂಡ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಆಟಗಾರ ರಾಸ್ ಟೇಲರ್ ತಂಡದಿಂದ ಹೊರಗುಳಿದಿದ್ದಾರೆ.
ರಾಸ್ ಟೇಲರ್ ಬದಲಿಗೆ ಕೋರಿ ಆ್ಯಂಡರ್ಸನ್ ಹಾಗೂ ಟಾಮ್ ಬ್ರೂಸ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುವ ಸಾಧ್ಯತೆಯಿದೆ.
ಇದೇ ವೇಳೆ, ಫೆ.17 ರಂದು ನಡೆಯಲಿರುವ ಏಕೈಕ ಟ್ವೆಂಟಿ-20 ಪಂದ್ಯಕ್ಕೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಲೂಕ್ ರಾಂಚಿ ಕಿವೀಸ್ ತಂಡಕ್ಕೆ ವಾಪಸಾಗಿದ್ದಾರೆ.
ನ್ಯೂಝಿಲೆಂಡ್ ಟ್ವೆಂಟಿ-20 ಪಂದ್ಯದ ಬಳಿಕ ರವಿವಾರದಿಂದ (ಫೆ.19) ಹ್ಯಾಮಿಲ್ಟನ್‌ನಲ್ಲಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಆಸ್ಟ್ರೇಲಿಯ ವಿರುದ್ಧ ಅಂತಿಮ ಪಂದ್ಯದಲ್ಲಿ ಆಡಿದ್ದ ಸ್ಪಿನ್ನರ್ ಐಶ್ ಸೋಧಿ ಆಫ್ರಿಕ ವಿರುದ್ಧ ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಆಫ್ರಿಕ ತಂಡ ರವಿವಾರ ರಾತ್ರಿ ನ್ಯೂಝಿಲೆಂಡ್‌ಗೆ ಆಗಮಿಸಲಿದೆ.
ನ್ಯೂಝಿಲೆಂಡ್ ಟ್ವೆಂಟಿ-20 ತಂಡ: ಕೇನ್ ವಿಲಿಯಮ್ಸನ್(ನಾಯಕ), ಕೋರಿ ಆ್ಯಂಡರ್ಸನ್, ಟ್ರೆಂಟ್ ಬೌಲ್ಟ್, ಟಾಮ್ ಬ್ರೂಸ್, ಫರ್ಗ್ಯುಸನ್, ಕಾಲಿನ್ ಡಿ ಗ್ರಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಜೇಮ್ಸ್ ನೀಶಮ್, ಲೂಕ್ ರಾಂಚಿ, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಥಿ, ಬೆನ್ ವೀಲರ್.
ನ್ಯೂಝಿಲೆಂಡ್ ಏಕದಿನ ತಂಡ: ಗ್ಲೆನ್ ಫಿಲಿಪ್ಸ್, ನೈಲ್ ಬ್ರೂಮ್, ಹೆನ್ರಿ ನಿಕೊಲ್ಸ್, ಟಾಮ್ ಬ್ರೂಸ್, ರಾಸ್ ಟೇಲರ್, ಮಾರ್ಕ್ ಚಾಪ್ಮನ್, ಡರ್ಲಿ ಮಿಚೆಲ್, ಟಾಡ್ ಅಸ್ಟ್ಲೆ, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಹೆನಿ ಶಿಪ್ಲೆ, ಝಾಕ್ ಗಿಬ್ಸನ್.







