Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 15ರಂದು ಏಕಕಾಲದಲ್ಲಿ 104 ಉಪಗ್ರಹ ಉಡಾವಣೆ

15ರಂದು ಏಕಕಾಲದಲ್ಲಿ 104 ಉಪಗ್ರಹ ಉಡಾವಣೆ

ವಿಶ್ವದಾಖಲೆ ಬರೆಯಲಿರುವ ಇಸ್ರೋ

ವಾರ್ತಾಭಾರತಿವಾರ್ತಾಭಾರತಿ12 Feb 2017 11:46 PM IST
share

 ಹೊಸದಿಲ್ಲಿ, ಫೆ.12: ಫೆ.15ರಂದು ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಗೊಳಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಲು ಸಜ್ಜಾಗಿರುವ ಇಸ್ರೋದ ಶುಕ್ರಯಾನ ಮತ್ತು ಮಂಗಳಯಾನ-2ರ ಕನಸಿಗೆ ಕೇಂದ್ರ ಸರಕಾರವು ತನ್ನ 2017-18ನೆ ಸಾಲಿನ ಮುಂಗಡಪತ್ರದಲ್ಲಿ ಬೆಂಬಲ ವ್ಯಕ್ತಪಡಿಸಿದೆ.

 ಮಂಗಳಯಾನ-2ನ್ನು 2021-22ರಲ್ಲಿ ನಡೆಸಲು ಇಸ್ರೋ ರೂಪುರೇಷೆಯನ್ನು ಹಾಕಿಕೊಂಡಿದೆ. ಈಗಿನ ಯೋಜನೆಯಂತೆ ಅದು ಅಂಗಾರಕನ ಮೇಲ್ಮೈ ಮೇಲೆ ರೋಬೊಟ್‌ನ್ನು ಇಳಿಸುವ ಉದ್ದೇಶ ಹೊಂದಿದೆ. 2013ರಲ್ಲಿ ಕೈಗೊಳ್ಳಲಾಗಿದ್ದ ಮಂಗಳಯಾನ-1 ಸಂಪೂರ್ಣವಾಗಿ ಭಾರತೀಯ ಅಭಿಯಾನವಾಗಿದ್ದರೆ ಮಂಗಳಯಾನ-2ರಲ್ಲಿ ಇಸ್ರೋ ಜೊತೆ ಕೈ ಜೋಡಿಸಲು ಫ್ರೆಂಚ್ ಸ್ಪೇಸ್ ಏಜನ್ಸಿಯು ಉತ್ಸುಕತೆ ತೋರಿಸಿದೆ.
ಸೌರವ್ಯವಸ್ಥೆಯಲ್ಲಿ ಎರಡನೆ ಗ್ರಹವಾಗಿರುವ ಶುಕ್ರಗ್ರಹಕ್ಕೆ ಇಸ್ರೋ ಯಾನವು ಅದರ ಮಂಗಳಯಾನ-1ರಂತೆ ಶುಕ್ರಗ್ರಹದ ಕಕ್ಷೆಯಲ್ಲಿ ಉಪಗ್ರಹವನ್ನು ಸ್ಥಿತಗೊಳಿಸಿ ಅಧ್ಯಯನ ಕೈಗೊಳ್ಳಬಹುದು. ಈ ತಿಂಗಳು ಭಾರತಕ್ಕೆ ಭೇಟಿ ನೀಡಿದ್ದ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿಯ ನಿರ್ದೇಶಕ ಮೈಕೇಲ್ ಎಂ.ವಾಟ್ಕಿನ್ಸ್ ಅವರು, ಶುಕ್ರಗ್ರಹಕ್ಕೆ ಯಾನವು ಅತ್ಯಂತ ಮಹತ್ವದ್ದಾಗಿದ್ದು, ಭಾರತದ ಚೊಚ್ಚಲ ಶುಕ್ರಯಾನದಲ್ಲಿ ಪಾಲುದಾರನಾಗಲು ನಾಸಾ ಖಂಡಿತವಾಗಿಯೂ ಬಯಸಲಿದೆ ಎಂದು ಹೇಳಿದ್ದರು.
ಈ ಅಭಿಯಾನಕ್ಕಾಗಿ ಇಲೆಕ್ಟ್ರಿಕಲ್ ಪ್ರೊಪಲ್ಶನ್ ಬಳಕೆಯ ಕುರಿತಂತೆ ಜಂಟಿ ಅಧ್ಯಯನವನ್ನು ಪ್ರಯತ್ನಿಸಲು ನಾಸಾ ಮತ್ತು ಇಸ್ರೋ ಈಗಾಗಲೇ ಮಾತುಕತೆಗಳನ್ನು ಆರಂಭಿಸಿವೆ.
ವಿಶ್ವದಾಖಲೆಗೆ ಸಜ್ಜು: ಫೆ.15ರಂದು ಬೆಳಗ್ಗೆ ತನ್ನ ಹೆಮ್ಮೆಯ ಪಿಎಸ್‌ಎಲ್‌ವಿ ಬಾಹ್ಯಾಕಾಶ ನೌಕೆಯ ಮೂಲಕ ಒಂದಲ್ಲ, ಎರಡಲ್ಲ, ಮೂರಲ್ಲ.... ಬರೋಬ್ಬರಿ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಇಸ್ರೋ ಸಜ್ಜಾಗಿದೆ. ಎಲ್ಲವೂ ಎಣಿಸಿದಂತೆ ನಡೆದರೆ ಇಸ್ರೋ ಉಪಗ್ರಹ ಉಡಾವಣೆಯಲ್ಲಿ ಹೊಸದೊಂದು ವಿಶ್ವದಾಖಲೆಯನ್ನು ಬರೆಯಲಿದೆ. ಯಾವುದೇ ದೇಶವು ಒಂದೇ ಬಾಹ್ಯಾಕಾಶ ಯಾನದಲ್ಲಿ ಉಪಗ್ರಹಗಳ ಸೆಂಚುರಿ ಸಾಧಿಸಲು ಈವರೆಗೆ ಪ್ರಯತ್ನಿಸಿದ್ದಿಲ್ಲ. ಈವರೆಗಿನ ವಿಶ್ವದಾಖಲೆ ರಷ್ಯಾದ ಹೆಸರಿನಲ್ಲಿದೆ. 2014ರಲ್ಲಿ ಅದು ಸುಧಾರಿತ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯ ಮೂಲಕ ಒಂದೇ ಹೊಡೆತಕ್ಕೆ 37 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸಿತ್ತು.

ಫೆ.15ರಂದು ಪಿಎಸ್‌ಎಲ್‌ವಿ ತನ್ನ ಉದರದಲ್ಲಿ 104 ಉಪಗ್ರಹಗಳನ್ನು ಇರಿಸಿಕೊಂಡು ನಭಕ್ಕೆ ಚಿಮ್ಮಲಿದೆ. ಈ ಪೈಕಿ ಮೂರು ಭಾರತದ ಉಪಗ್ರಹಗಳಾಗಿದ್ದರೆ, 101 ಸಣ್ಣ ಗಾತ್ರದ ವಿದೇಶಿ ಉಪಗ್ರಹಗಳಾಗಿವೆ. ಭಾರತದ ಕಾರ್ಟೊಸ್ಯಾಟ್-2,500 ಕಿ.ಮೀ. ಎತ್ತರದಲ್ಲಿ ಕಕ್ಷೆಯನ್ನು ಸೇರುವ ಮೊದಲ ಉಪಗ್ರಹವಾಗಿದ್ದರೆ, ಇತರ ಎರಡು ಭಾರತೀಯ ಉಪಗ್ರಹಗಳು ತಲಾ 10 ಕೆ.ಜಿ.ಗೂ ಕಡಿಮೆ ತೂಗುತ್ತಿದ್ದು,ಇಸ್ರೋ ನ್ಯಾನೊ ಉಪಗ್ರಹಗಳ ವರ್ಗಕ್ಕೆ ನಾಂದಿ ಹಾಡಲಿವೆ. ಇಸ್ರೇಲ್, ಕಝಕಸ್ತಾನ್, ನೆದರ್‌ಲ್ಯಾಂಡ್ಸ್, ಸಿಟ್ಜರ್‌ಲ್ಯಾಂಡ್ ಮತ್ತು ಯುಎಇಗಳ ತಲಾ ಒಂದು ಉಪಗ್ರಹಗಳ ಜೊತೆಗೆ ಅಮೆರಿಕದ 96 ಉಪಗ್ರಹಗಳೂ ಬಾಹ್ಯಾಕಾಶವನ್ನು ಪ್ರವೇಶಿಸಲಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X