Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೂಡುಬಿದಿರೆ ಮಾರುಕಟ್ಟೆ ಸಂಕೀರ್ಣ:...

ಮೂಡುಬಿದಿರೆ ಮಾರುಕಟ್ಟೆ ಸಂಕೀರ್ಣ: ನನಸಾಗುವತ್ತ ದಶಕಗಳ ಕನಸು

ಹಾರಿಸ್ ಹೊಸ್ಮಾರ್ಹಾರಿಸ್ ಹೊಸ್ಮಾರ್12 Feb 2017 11:51 PM IST
share
ಮೂಡುಬಿದಿರೆ ಮಾರುಕಟ್ಟೆ ಸಂಕೀರ್ಣ: ನನಸಾಗುವತ್ತ ದಶಕಗಳ ಕನಸು

ಮೂಡುಬಿದಿರೆ, ೆ.12: ನಗರದ ಹಳೆ ಬಸ್ ನಿಲ್ದಾಣದ ಬಳಿಯಿರುವ ಮಾರುಕಟ್ಟೆ ತನ್ನ ಹಳೆಯ ಕಾಲದ ವೈಭವದಿಂದ ಮುಕ್ತಿ ಹೊಂದಿ ಅಲ್ಲಿ ಹೊಸ ಮಾರುಕಟ್ಟೆ ಕಟ್ಟಡ ಸಂಕೀರ್ಣ ರೂಪುಗೊಳ್ಳುವ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾದಂತೆ ಕಂಡುಬರುತ್ತಿದೆ. ಮೂಡುಬಿದಿರೆ ಪೇಟೆಯ ಅತ್ಯಂತ ಹೆಚ್ಚು ಜನರು ಓಡಾಡುವ ಹಾಗೂ ಪಾರ್ಕಿಂಗ್ ಸಮಸ್ಯೆಯಿಂದ ವಾಹನಗಳು ಟ್ರಾಫಿಕ್ ಕಿರಿಕಿರಿ ಅನುಭವಿಸುವ ಸ್ಥಳವೂ ಇದೇ ಮಾರುಕಟ್ಟೆಯ ಸುತ್ತಲಿನ ವಠಾರ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಈ ಮಾರುಕಟ್ಟೆಯೊಳಗೆ ಅಕೃತವಾಗಿ 68 ಅಂಗಡಿಗಳಿದ್ದು, ಜೊತೆಗೆ ಇತರೆ ವ್ಯಾಪಾರಿಗಳು ತಮ್ಮ ಜೀವನಮಾರ್ಗವನ್ನು ಕಂಡುಕೊಂಡಿದ್ದಾರೆ. ಆದರೆ ಸಮಸ್ಯೆಯ ಆಗರವಾಗಿರುವ ಈ ಮಾರುಕಟ್ಟೆ ಪ್ರಾಂಗಣದಲ್ಲಿ ಮೀನು ಹಾಗೂ ತರಕಾರಿ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತದೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಮತ್ತು ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಗೆ ಅವಕಾಶಗಳಿಲ್ಲದೆ ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಹರಸಾಹಸ ಪಡುವಂತಹ ಪರಿಸ್ಥಿತಿ ಇದೆ. ಈ ಮಾರುಕಟ್ಟೆಯನ್ನು ಪುನರ್‌ನಿರ್ಮಾಣಗೊಳಿಸಲೆಂದು ಕಳೆದ ಹಲವು ಸರಕಾರಗಳಿಂದ ಅನುದಾನ ಹಾಗೂ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಮಾತುಕತೆಗಳಾಗಿತ್ತಾದರೂ, ಇದುವರೆಗೆ ಅದು ನೆರವೇರಿಲ್ಲ. ಇದೀಗ ನಾಗರಿಕರು ಹಾಗೂ ವ್ಯಾಪಾರಿಗಳಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಜನಪ್ರತಿನಿಗಳು ಎಚ್ಚೆತ್ತಿದ್ದಾರಾದರೂ ನೂತನ ಮಾರುಕಟ್ಟೆ ಪೂರ್ಣಗೊಳ್ಳುವುದಕ್ಕೆ ಎರಡು ವರ್ಷಗಳೇ ಬೇಕು. ವ್ಯವಸ್ಥಿತವಾಗಿ ಮಾರುಕಟ್ಟೆ ಸಂಕೀರ್ಣ ಮಾಡುವುದಕ್ಕೆ ಸುಮಾರು 25 ಕೋ.ರೂ. ಯೋಜನಾ ಗಾತ್ರದ ನೀಲನಕಾಶೆ ಸಿದ್ಧವಾಗಿದ್ದು, ಅರ್ಹ ಗುತ್ತಿಗೆದಾರರ ಹುಡುಕಾಟಕ್ಕಾಗಿ ಇ-ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆಯ ಕೊನೆಯ ದಿನಾಂಕವನ್ನು ೆ.13ಕ್ಕೆ ನಿಗದಿ ಗೊಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಕ್ತಾಯ ಕಂಡರೆ ಸದ್ಯದಲ್ಲೇ ಕಾಮಗಾರಿ ಶುರುವಾಗುವ ನಿರೀಕ್ಷೆಯಿದೆ. 0.98 ಎಕರೆ ವಿಸ್ತಾರವಿರುವ ಈ ಮಾರುಕಟ್ಟೆಯ ಹೊಸ ನೀಲನಕಾಶೆಯಂತೆ ಸಂಕೀರ್ಣ ಸಿದ್ಧಗೊಂಡರೆ ಕಟ್ಟಡದ ಬೇಸ್‌ಮೆಂಟ್‌ನಲ್ಲಿ 2,375 ಚದರ ಅಡಿಯ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಒದಗಲಿದೆ. 200 ಕಾರು, 150 ದ್ವಿಚಕ್ರ ವಾಹನಗಳಿಗೆ ಎರಡು ಮಹಡಿಗಳಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಇದ್ದು, ಮುಖ್ಯರಸ್ತೆಯ ಟ್ರಾಫಿಕ್ ಸಮಸ್ಯೆಗೆ ಭಾಗಶಃ ಪರಿಹಾರ ಕಾಣ

ುವ ಭರವಸೆ ಇದೆ. 65 ಅಂಗಡಿಗಳು, 88 ತರಕಾರಿ ಮಾರಾಟ ಘಟಕಗಳು, 72 ಮೀನು ಮಾರಾಟ ಘಟಕಗಳು, ತಲಾ 2 ಚಿಕನ್ ಮತ್ತು 2 ಮಟನ್ ಸ್ಟಾಲ್‌ಗಳಿಗೆ ಈ ನೂತನ ಸಂಕೀರ್ಣದಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಸಂಕೀರ್ಣದಲ್ಲಿ 4 ಲ್‌ಟಿ ಸೌಲಭ್ಯ, ಮೆಟ್ಟಿಲು ಹಾಗೂ ವಿಶಾಲವಾದ ಪ್ಯಾಸೇಜ್‌ಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ಶೌಚಾಲಯ ವ್ಯವಸ್ಥೆಯನ್ನು ಸಮರ್ಪಕವಾಗಿ ಅಳವಡಿಸುವ ಕುರಿತು ನಕ್ಷೆಯಲ್ಲಿ ಗುರುತಿಸಲಾಗಿದೆ. ಮಾರುಕಟ್ಟೆ ಕಾಮಗಾರಿ ಮುಗಿಯುವ 2 ವರ್ಷದ ಅವಗೆ ಸ್ವರಾಜ್ಯ ಮೈದಾನಕ್ಕೆ ಪೂರ್ತಿ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸಲು ಪುರಸಭೆ ತೀರ್ಮಾನಿಸಿದೆ. ತ್ರಿಕೋನಾಕಾರದಲ್ಲಿ ನಿರ್ಮಾಣವಾಗಲಿರುವ ಈ ಮಾರುಕಟ್ಟೆ ಸಂಕೀರ್ಣವನ್ನು ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಶನ್) ನಿಯಮಗಳಂತೆ ರಚಿಸುವ ನಿರ್ಧಾರಕ್ಕೆ ಬರಲಾಗಿದ್ದು, ಬಳಿಕ 15 ವರ್ಷಗಳವರೆಗೆ ಪುರಸಭೆಗೆ ಮಾರುಕಟ್ಟೆಯ ಪೂರ್ಣ ಒಡೆತನ ಸಿಗಲಿದೆ. ಅಲ್ಲಿಯವರೆಗೆ ಖಾಸಗಿ - ಸರಕಾರಿ ಜಂಟಿಯಾಗಿ ಸಂಕೀರ್ಣದ ಆಯವ್ಯಯ ನೋಡಿಕೊಳ್ಳಲಿದೆ.

ಮೂಡುಬಿದಿರೆ ನಗರಕ್ಕೆ ಸುಸಜ್ಜಿತ ಮಾರುಕಟ್ಟೆಯ ಆವಶ್ಯಕತೆ ಇದೆ. ಈಗಿನ ಮಾರುಕಟ್ಟೆ ಸಮಸ್ಯೆಗಳಿಂದ ತುಂಬಿದ್ದು, ಜನರಿಗೆ ಓಡಾಡಲೂ ಸರಿಯಾದ ಸ್ಥಳಾವಕಾಶವಿಲ್ಲ. ನೂತನ ನಿರ್ಮಾಣದ ಉದ್ದೇಶ ಹೊಂದಿರುವ ಮಾರುಕಟ್ಟೆ ಸಂಕೀರ್ಣ ಮೂಡುಬಿದಿರೆಯ ನಾಗರಿಕರಿಗೆ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ.

*ಹರಿಣಾಕ್ಷಿ ಎಸ್. ಸುವರ್ಣ,

ಅಧ್ಯಕ್ಷರು, ಮೂಡುಬಿದಿರೆ ಪುರಸಭೆ.

share
ಹಾರಿಸ್ ಹೊಸ್ಮಾರ್
ಹಾರಿಸ್ ಹೊಸ್ಮಾರ್
Next Story
X