ಕಾಸರಗೋಡು ಪಾಸ್‌ಪೋರ್ಟ್ ಕೇಂದ್ರ ಸ್ಥಳಾಂತರಕ್ಕೆ ಚಿಂತನೆ

ಕಾಸರಗೋಡು, ೆ.12: ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಆರಂಭಗೊಳ್ಳುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಸೌಲಭ್ಯ ಕೊರತೆ ಹಿನ್ನೆಲೆಯಲ್ಲಿ ವಿದ್ಯಾನಗರದಲ್ಲಿ ಸಿವಿಲ್ ಸ್ಟೇಷನ್‌ನ ಜಿಪಂ ಕಚೇರಿಯ ಯೋಜನಾ ಮಂಡಳಿ ಕಟ್ಟಡಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿದೆ. ಪಾಸ್‌ಪೋರ್ಟ್ ಸೇವಾ ಕೇಂದ್ರವು ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಆರಂಭಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ 12 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಆದರೆ ಇಲ್ಲಿ ಸ್ಥಳಾವಕಾಶವಿಲ್ಲದ ಹಿನ್ನೆಲೆಯಲ್ಲಿ ಸದ್ಯ 6 ಮಂದಿ ಸಿಬ್ಬಂದಿಯನ್ನು ಮಾತ್ರ ನೇಮಕ ಮಾಡಲಾಗಿದ್ದು, ಪಾಸ್‌ಪೋರ್ಟ್ ಗಾಗಿ ಪ್ರತಿದಿನ ನೂರಾರು ಮಂದಿ ಆಗಮಿಸುವುದರಿಂದ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರವನ್ನು ಮುಂದೆ ಸಿವಿಲ್ ಸ್ಟೇಷನ್‌ಗೆ ಸ್ಥಳಾಂತರಿಸುವ ಚಿಂತನೆ ನಡೆಸಲಾಗಿದ್ದು, ಪಾಸ್‌ಪೋರ್ಟ್ ಸೇವಾ ಕೇಂದ್ರ ಅಂಚೆಕಚೇರಿಗೆ ಹೊಂದಿಕೊಂಡು ಕಾರ್ಯನಿರ್ವಹಿಸಬೇಕಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರ ಯತ್ನಕ್ಕೆ ಅಡಚಣೆ ಯಾಗಿದೆ. ಆದರೂ ಸೌಲಭ್ಯ ಕೊರತೆಯಿಂದ ವಿದ್ಯಾನಗರಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಕಾಸರಗೋಡಿಗೆ ಮಂಜೂರಾಗಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರ ೆ.28ಕ್ಕೆ ಆರಂಭಗೊಳ್ಳಲಿದೆ.





