ಮೂಲ್ಕಿ: ಮೊಬೈಲ್ ಕಳ್ಳನ ಬಂಧನ
ಮೂಲ್ಕಿ, ಫೆ.13: ಇಲ್ಲಿಗೆ ಸಮೀಪದ ಅತಿಕಾರಿ ಬೆಟ್ಟುವಿನ ದೆಪ್ಪುಣಿಗುತ್ತು ನಿವಾಸಿ ಕುಮಾರಿ ಪ್ರತೀಕ್ಷಾ ಶೆಟ್ಟಿಯವರ ಮನೆಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನ ಅವಧಿಯಲ್ಲಿ ಮನೆಯ ಒಳ ಪ್ರವೇಶಿಸಿ ಮನೆಯ ಮಲಗುವ ಕೋಣೆಯಲ್ಲಿ ಮಂಚದ ಬಳಿಯಿರಿಸಿದ್ದ ರೂ 10000 ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್ ಅನ್ನು ಕಳ್ಳತನ ಮಾಡಿದ ಅರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಅತಿಕಾರಿಬೆಟ್ಟುವಿನ ದೆಪ್ಪುಣಿಗುತ್ತು ರಮೇಶ್ ಶೆಟ್ಟಿಯವರ ಮನೆಗೆ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನ ಅವಧಿಯಲ್ಲಿ ನುಗ್ಗಿ ಮನೆಯ ಮಲಗುವ ಕೋಣಿಯಲ್ಲಿ ಪ್ರತೀಕ್ಷಾ ಶೆಟ್ಟಿಯವರು ಉಪಯೋಗಿಸುತ್ತಿದ್ದ ಸುಮಾರು 10000 ರೂ ಮೌಲ್ಯದ ಸ್ಯಾಮ ಸಂಗ್ ಮೊಬೈಲ್ ಅನ್ನು ಕಳವು ಮಾಡಿದ ಆರೋಪಿ ಉಡುಪಿ ಜಿಲ್ಲೆಯ ಮಲ್ಪೆ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ರಾಘವೇಂದ್ರ ಭಜನಾ ಮಂದಿರದ ಬಳಿಯ ನಿವಾಸಿ ಗಿರೀಶ್(24)ನನ್ನು ಮೂಲ್ಕಿ ಪೊಲೀಸರು ಬಂದಿಸಿ ಆತನಿಂದ ಕಳವು ಮಾಡಿದ ಮೊಬೈಲ್‌ನ್ನು ವಶ ಪಡಿಸಿಕೊಂಡಿದ್ದಾರೆ. ಇತನು ಹಳೇ ಆರೋಪಿಯಾಗಿದ್ದು ಮಲ್ಪೆ ಪೊಲೀಸ್ ಠಾಣೆಯಲ್ಲಿ 4 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.





