ಪ್ರೇಮಿಗಳ ದಿನಾಚರಣೆಗೆ ಮುನ್ನ ಎಳೆಯ ಪ್ರೇಮಿಗಳ ಆತ್ಮಹತ್ಯೆ

ಕೋಲ್ಕತಾ, ಫೆ.13: ಮುರ್ಷಿದಾಬಾದ್‌ನ ಬಾಗಂಡಿ ಗ್ರಾಮದಲ್ಲಿ ಹದಿಹರೆಯದ ಪ್ರೇಮಿಗಳ ಜೋಡಿಯೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಪ್ರೇಮಿಗಳ ದಿನಾಚರಣೆಗೆ ಮುನ್ನಾದಿನವಾದ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೇನಿಪುರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಬ್‌ನೂರ್ ಖಾತುನ್(16) ಮತ್ತು ರಿಂಕು ಶೇಖ್(16) ಪರಸ್ಪರ ಪ್ರೇಮಿಸುತ್ತಿದ್ದು, ಪ್ರೇಮಿಗಳ ದಿನವಾದ ಫೆ.14ರಂದು ಮದುವೆ ಯಾಗಲು ನಿರ್ಧರಿಸಿದ್ದರು. ಆದರೆ ತಾವು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಮನೆಯವರು ಮದುವೆಯಾಗಲು ಬಿಡುವುದಿಲ್ಲ ಎಂದು ಭಾವಿಸಿದ್ದ ಅವರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರೂ ರವಿವಾರ ರಾತ್ರಿಯಿಂದಲೇ ತಮ್ಮ ಮನೆಗಳಿಂದ ನಾಪತ್ತೆಯಾಗಿದ್ದರು.
ಇವರಿಬ್ಬರ ಪ್ರೇಮದ ಬಗ್ಗೆ ಇಡೀ ಶಾಲೆಗೇ ಗೊತ್ತಿತ್ತು. ಆದರೆ ಈ ಬಗ್ಗೆ ತಮಗೇನೂ ತಿಳಿದಿರಲಿಲ್ಲ ಎಂದು ಎರಡೂ ಕುಟುಂಬಗಳು ಹೇಳಿವೆ.
Next Story





