ಪಾಪ್ಯುಲರ್ ಫ್ರಂಟ್ 10ನೇ ವರ್ಷಾಚರಣೆ : ಫೆ.17ರಂದು ಉಪ್ಪಿನಂಗಡಿಯಲ್ಲಿ ಯುನಿಟಿ ಮಾರ್ಚ್
ಪುತ್ತೂರು,ಫೆ.12: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಇದರ 10ನೇ ವರ್ಷಾಚರಣೆ ಹಿನ್ನಲೆಯಲ್ಲಿ ಫೆ.17ರಂದು ಅಪರಾಹ್ನ 3 ಗಂಟೆಗೆ ಉಪ್ಪಿನಂಗಡಿಯಲ್ಲಿ ಯುನಿಟಿ ಮಾರ್ಚ್ ಮತ್ತು ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಪ್ಪಿನಂಗಡಿ ಕೂಟೇಲು ಸೇತುವೆ ಬಳಿಯಿಂದ ಸಾರ್ವಜನಿಕ ಸಭೆ ನಡೆಸಲಾಗುವ ಹೆಚ್.ಎಂ. ಮೈದಾನದ ತನಕ ಯುನಿಟಿ ಮಾರ್ಚ್ ನಡೆಯಲಿದೆ. ಬಳಿಕ 4 ಗಂಟೆಗೆ ಸರಿಯಾಗಿ ಸಾರ್ವಜನಿಕ ಸಭೆ ನಡೆಯಲಿದೆ. ಪ್ರಗತಿಪರ ಚಿಂತಕರಾದ ವಾಸುದೇವ ಗೌಡ, ಭಾಸ್ಕರ ಪ್ರಸಾದ್, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ತುಂಬೆ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಾಮಾಜಿಕ ರಂಗದಲ್ಲಿ ಕಳೆದ ಒಂದು ದಶಕಗಳಿಂದ ಸಕ್ರಿಯವಾಗಿರುವ ಪಿಎಫ್‌ಐ ಸಂಘಟನೆ ಇದೀಗ ತನ್ನ 10ನೇ ವರ್ಷಾಚರಣೆಯನ್ನು ಸ್ವಾತಂತ್ರ್ಯ, ನ್ಯಾಯ, ರಕ್ಷಣೆಯ ಕಾವಲಾಳುಗಳಾಗಿ ಎಂಬ ದ್ಯೇಯದೊಂದಿಗೆ ದೇಶದಾದ್ಯಂತ ಆಚರಿಸುತ್ತಿದ್ದು, ಕೋಮುವಾದ, ಅಸಹಿಷ್ಣುತೆ ತಡೆಯುವ ಮತ್ತು ಪ್ರಜ್ಞಾವಂತಿಕೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಎಫ್‌ಐ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಹಮ್ಮದ್ ಇಕ್ಬಾಲ್, ಪುತ್ತೂರು ಜಿಲ್ಲಾಧ್ಯಕ್ಷ ಅಬೂಬಕ್ಕರ್ ರಿಝ್ವಾನ್, ಕಾರ್ಯದರ್ಶಿ ಶಂಸುದ್ದೀನ್, ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಮುಸ್ತಫಾ ಪೆರ್ನೆ ಉಪಸ್ಥಿತರಿದ್ದರು.







