ಬೀಡಿ ಕಾರ್ಮಿಕರ ಸಂಘಟನೆಯ ಮನವಿ

ಮಂಗಳೂರು, ಫೆ.13: ಬೀಡಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ನಾಗರಿಕ ಹೋರಾಟ ಸಮಿತಿಯ ಮುಖಂಡರು ಮುಖ್ಯಮಂತ್ರಿ, ಕಾರ್ಮಿಕ ಸಚಿವ, ಆರೋಗ್ಯ ಸಚಿವ, ಆಹಾರ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿಧಾನಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಬೀಡಿ ಕೈಗಾರಿಕೆಗೆ ಸಂಬಂಧಪಟ್ಟವರ ಮತ್ತು ಕಾರ್ಮಿಕ ಮುಖಂಡರುಗಳ ಜಂಟಿ ಸಭೆಯನ್ನು ಕರೆದು ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಹರಿಸಲಾಗುವುದೆಂದು ಸಚಿವರುಗಳು ಭರವಸೆ ನೀಡಿದರು.
ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಮಹಮ್ಮದ್ ರಫಿ, ಎಸ್. ಆಲಿಯಬ್ಬ, ರವಿ ಉಡುಪಿ, ಕೃಷ್ಣಪ್ಪ ತೊಕ್ಕೊಟ್ಟು ಉಪಸ್ಥಿತರಿದ್ದರು.
Next Story





