ಮೋಂಟುಗೋಳಿ: ಕಬಡ್ಡಿ ಪಂದ್ಯಾಟ

ಮಂಗಳೂರು, ಫೆ.13: ಅಜೇಯ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಮೋಂಟುಗೋಳಿ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ, ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು.
ಡಾ.ಜಿ.ಕೃಷ್ಣಭಟ್ ಗಂಗರಮಜಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು. ಏಶ್ಯನ್ ಗೇಮ್ಸ್ ಕಬಡ್ಡಿ ಗೋಲ್ಡ್ ಮೆಡಲಿಸ್ಟ್ ಜಗದೀಶ್ ಕುಂಬಳೆ ಕ್ರೀಡಾಂಗಣ ಉದ್ಘಾಟಿಸಿದರು. ಈ ಸಂದರ್ಭ ಯೆನೆಪೊಯ ಉಚಿತ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸಂತೋಷ್ ಶೆಟ್ಟಿ ಅಸೈಗೋಳಿ, ಪ್ರಶಾಂತ್ ಕಾಜವ, ಅಬ್ದುಲ್ ಜಲೀಲ್ ಮೋಂಟುಗೋಳಿ, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ, ಚಂದ್ರಹಾಸ ಉಳ್ಳಾಲ, ಜೆಡಿಎಸ್ ಮುಖಂಡ ಸೂಫಿಕುಂಞಿ ಗುದುರು, ಮಾಜಿ ಜಿಪಂ ಸದಸ್ಯ ಎನ್.ಎಸ್.ಕರೀಂ, ಬಾಳೆಪುಣಿ ಗ್ರಾಪಂ ಸದಸ್ಯರಾದ ನಂದರಾಜ್ ಶೆಟ್ಟಿ ಪಿಜಿನಬೈಲು, ನಾಸಿರ್ ನಡುಪದವು, ಯುವ ಕಾಂಗ್ರೆಸ್ ಮುಖಂಡರಾದ ಸುಹೈಲ್ ಕಂದಕ್, ನಾಸಿರ್ ಅಹ್ಮದ್ ಸಾಮಣಿಗೆ, ಸಿದ್ದೀಕ್ ಪಾರೆ, ಎಂ.ಎಸ್.ಸುಲೈಮಾನ್, ಹಮೀದ್ ಕುಂಜತ್ತೂರ್, ಸಂತೋಷ್ ಕುಮಾರ್ ತೊಕ್ಕೊಟ್ಟು, ಜಗದೀಶ್ ಮುಡಿಪು, ನಟ ರಿತೇಶ್ ತೊಕ್ಕೊಟ್ಟು, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಮಧು ಜಿ.ಆರ್., ಅಜೇಯ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಬ್ಬಾಸ್ ಎರ್ಮಾಟಿ, ಬ್ಲಡ್ ಡೋನರ್ಸ್‌ನ ಸಿದ್ದೀಕ್ ಉರ್ಣಿ ಭಾಗವಹಿಸಿದ್ದರು.
ಬಂಟ್ವಾಳ ತಾಪಂ ಸದಸ್ಯ ಹೈದರ್ ಕೈರಂಗಳ ಸ್ವಾಗತಿಸಿದರು. ನೌಫಲ್ ಮೋಂಟುಗೋಳಿ ವಂದಿಸಿದರು. ಅಬ್ದುಲ್ ಸತ್ತಾರ್ ಕೈರಂಗಳ ಮತ್ತು ಇರ್ಷಾದ್ ತೋಟಾಲ್ ಕಾರ್ಯಕ್ರಮ ನಿರೂಪಿಸಿದರು.





