ರಾಜ್ಯ ರಾಷ್ಟ್ರ ಮಟ್ಟದ ಮಕ್ಕಳ ಪ್ರತಿಭೋತ್ಸವ

ಹೆಬ್ರಿ, ಫೆ.13: ಶ್ರೀವಿದ್ಯಾ ಸಂಸ್ಥೆ ಅರ್ಪಿಸಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಅಜೆಕಾರು ಹೋಬಳಿ, ನಮ ತುಳುವೆರ್ ಕಲಾ ಸಂಘಟನೆ, ನಾಟ್ಕದೂರು ಮುದ್ರಾಡಿ ಇವುಗಳ ಸಹ ಯೋಗದೊಂದಿಗೆ ಮುದ್ರಾಡಿ ನಾಟ್ಕದೂರು ಬಯಲು ರಂಗಮಂದಿರದಲ್ಲಿ ನಡೆದ 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರಾಜ್ಯ ರಾಷ್ಟ್ರ ಮಟ್ಟದ ಮಕ್ಕಳ ಪ್ರತಿಭೋತ್ಸವಕ್ಕೆ ಬಾಲ ವಿಜ್ಞಾನಿ ಧೃತಿ ಮುಂಡೋಡಿ ಶನಿವಾರ ಚಾಲನೆ ನೀಡಿದರು.
ಇದೇ ಸಂದರ್ದಲ್ಲಿ ಬಹುಮುಖ ಪ್ರತಿಬೆಗಳಾದ ರೆಮೋನಾ ಇವೆಟ್ಟ್ ಪಿರೇರಾ, ಶ್ರೇಯಾದಾಸ್, ಶ್ರೇಯಾ ಜೈನ್, ಸಾಕ್ಷಿ ಗುರುಪುರ, ಸ್ಪೂರ್ತಿ ಎಸ್.ಬಿ., ಕೃತಿ ಆರ್. ಸನಿಲ್, ಪ್ರದೀಶ್ ಕೆ., ಅಪೇಕ್ಷಾ ಮಂಗಳೂರು, ಅತ್ರೇಯಿ ಕೃಷ್ಣ ಕಾರ್ಕಳ, ಗೌತಮ್ ಭಟ್ ಮಂಗಳೂರು, ಕೀರ್ತನಾ ಅಮೀನ್ ಉದ್ಯಾವರ, ಸನ್ನಿಧಿ ರೈ ಕಾಸರಗೋಡು, ಸೌಂದರ್ಯ ಮಂಗ ಳೂರು, ವಿಜೇತಾ ಶೆಟ್ಟಿ ಉಡುಪಿ, ಅಶ್ವಿನಿ ಬಿ.ಕೆ. ಉಗ್ರಾಣಿಕಟ್ಟೆ, ಶ್ರಾವಣ್ ಬಾಸ್ರಿ, ನೇಹಿಗ ಮೂಡಬಿದಿರೆ, ಸಾತ್ವಿಕ್ ಎಸ್. ಆಚಾರ್ಯ ಅವರಿಗೆ ಕರ್ನಾಟಕ ಪ್ರತಿಭಾ ರತ್ನ ಗೌರವ ಪ್ರದಾನ ಮಾಡಲಾಯಿತು.
ಕಟೀಲು ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ, ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೋಅಪರೇಟಿವ್ ಸೊಸೈಟಿ, ನಮ್ಮ ತುಳುನಾಡು ಟ್ರಸ್ಟ್, ಉಡುಪಿ ಒಳಕಾಡು ಸಂಯುಕ್ತ ಪ್ರೌಢಶಾಲೆ, ಕುಂದಪ್ರಭ ವಾರ ಪತ್ರಿಕೆ, ಹೆಬ್ರಿ ಚೈತನ್ಯ ಯುವ ವೃಂದ ಮತ್ತು ಸಾಂಸ್ಕೃತಿಕ ಕ್ರೀಡಾ ಸಂಘ, ಮಂಗಳೂರು ಆಕೃತಿ ಪ್ರಿಂಟ್ಸ್, ಕೋಅಪರೇಟಿವ್ ಕಾಲೇಜು ಬದಿಯಡ್ಕ ಮತ್ತು ಉಡುಪಿ ಸ್ನೇಹ ಟ್ಯುಟೋರಿಯಲ್ ಕಾಲೇಜಿಗಳಿಗೆ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರು, ಉಪಾಧ್ಯಕ್ಷ ಸುಕುಮಾರ್ ಮೋಹನ್, ಕಾರ್ಯದರ್ಶಿ ಸುಕುಮಾರ್ ಮುನಿಯಾಲ್, ಮಂಜಪ್ಪ ದ್ಯಾಗೋಣಿ, ಉಡುಪಿ ವಾಸುದೇವಾ ಭಟ್, ಹೆಬ್ರಿ ಭಾಸ್ಕರ ಜೋಯಿಸ್, ಹೆಬ್ರಿ ಟಿ.ಜಿ.ಆಚಾರ್ಯ, ಸುರೇಂದ್ರ ಮೋಹನ್, ಸುಧೀಂದ್ರ ಮೋಹನ್, ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕರುಣಾಕರ ಬಳ್ಕೂರ್ ಸ್ವಾಗತಿಸಿದರು. ಗಣೇಶ್ ಜಾಲ್ಸೂರ್ ಮತ್ತು ಸುಪ್ರೀತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.







