ಸ್ಪರ್ಧೆಯಲ್ಲಿ ಬೈಲೂರು ವಿದ್ಯಾರ್ಥಿಗಳ ಸಾಧನೆ

ಉಡುಪಿ, ಫೆ.13: ಉಡುಪಿ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಇತ್ತೀಚೆಗೆ ನಡೆದ ಹಯವದನೋತ್ಸವದ ಸಮೂಹ ನೃತ್ಯ ವಿಭಾಗದಲ್ಲಿ ಪ್ರಥಮ ಬಹುಮಾನ, ಹಯವದನಾಂಕಿತ ಸಮೂಹ ಗಾಯನ ಸ್ಫರ್ಧೆಯಲ್ಲಿ ತೃತೀಯ ಹಾಗೂ ವಿಶೇಷ ಬಹುಮಾನಗಳನ್ನು ಬೈಲೂರು ವಾಸುದೇವಕೃಪಾ ವಿದ್ಯಾಮಂದಿರ ಶಾಲೆಯ ಜೂನಿಯರ್ ಹಾಗೂ ಸೀನಿಯರ್ ತಂಡಗಳ ವಿದ್ಯಾರ್ಥಿಗಳು ಪಡೆದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಕೆ.ಅಣ್ಣಪ್ಪಶೆಣೈ, ಶಾಲಾ ಮುಖ್ಯೋಪಾಧ್ಯಾಯಿನಿ ಅಮಿತಾಂಜಲಿ, ನೃತ್ಯ ತರಬೇತಿಗೈದ ಶಿಕ್ಷಕರುಗಳಾದ ಶಿಲ್ಪಾದೀಪಕ್, ಕಿಶೋರ್ ಉಪಸ್ಥಿತರಿದ್ದರು.
Next Story





