ಕೆಎಲ್‌ಎಫ್‌ಗೆ ಐಸಿಸಿಆರ್ ಟಿಕೆಟ್ ಪ್ರಾಯೋಜಕತ್ವ: ವಿವಾದ ಸೃಷ್ಟಿ

ಹೊಸದಿಲ್ಲಿ,ಫೆ.13: ಭಾರತ - ಪಾಕಿಸ್ತಾನ ಸಂಬಂಧಗಳು ಹದಗೆಟ್ಟಿರುವ ನಡುವೆಯೇ ಕರಾಚಿ ಸಾಹಿತ್ಯೋತ್ಸವ(ಕೆಎಲ್‌ಎಫ್)ದಲ್ಲಿ ಭಾಗವಹಿಸಲು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ(ಐಸಿಸಿಆರ್)ಯು ನಾಲ್ವರು ಭಾರತೀಯ ಲೇಖಕರಿಗೆ ವಿಮಾನದ ಟಿಕೆಟ್‌ಗಳನ್ನು ಪ್ರಾಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ಸೋಮವಾರ ವಿವಾದವೊಂದು ಹುಟ್ಟಿಕೊಂಡಿದೆ. ಇಸ್ಲಾಮಾಬಾದ್‌ನಲ್ಲಿಯ ಭಾರತೀಯ ರಾಯಭಾರಿ ಕಚೇರಿ ಶಿಫಾರಸಿನಂತೆ ತಾನು ಟಿಕೆಟ್‌ಗಳನ್ನು ಪ್ರಾಯೋಜಿಸಿದ್ದಾಗಿ ಐಸಿಸಿಆರ್ ಸಮರ್ಥಿಸಿ ಕೊಂಡಿದೆ.
ಭಾರತೀಯ ರಾಯಭಾರಿ ಕಚೇರಿಯ ಶಿಫಾರಸಿನಂತೆ ನಾಲ್ವರು ಭಾರತೀಯ ಲೇಖಕರಿಗೆ ವಿಮಾನದ ಟಿಕೆಟ್‌ಗಳನ್ನಷ್ಟೇ ಖರೀದಿಸಿದ್ದೇವೆ. ನಾವು ಕೆಎಲ್‌ಎಫ್‌ನ್ನು ಪ್ರಾಯೋಜಿಸಿಲ್ಲ. ನಮ್ಮದು ತುಂಬ ಸೀಮಿತ ಪಾತ್ರವಾಗಿದೆ ಎಂದು ಐಸಿಸಿಆರ್‌ನ ಮಹಾ ನಿರ್ದೇಶಕ ಅಮರೇಂದ್ರ ಖಟುವಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪಾಕಿಸ್ತಾನದಲ್ಲಿ ಫೆ.10ರಿಂದ 12ರವರೆಗೆ ನಡೆದ ಕೆಎಲ್‌ಎಫ್‌ನಲ್ಲಿ ಖ್ಯಾತ ಲೇಖಕಿ ಊರ್ವಶಿ ಬುಟಾಲಿಯಾ ಸೇರಿದಂತೆ ನಾಲ್ವರು ಭಾರತೀಯ ಲೇಖಕರು ಪಾಲ್ಗೊಂಡಿದ್ದರು.
Next Story





