ನೆಕ್ಕಿತ್ತಡ್ಕ ಮಖಾಂ ಉರೂಸ್ ಪ್ರಯುಕ್ತ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಡಬ, ಫೆ.13. ಮರ್ಧಾಳ ತಕ್ವಿಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿ ಇದೇ ತಿಂಗಳ 20 ರಿಂದ 23ರವರೆಗೆ ನಡೆಯಲಿರುವ ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರಂಭದ ಪ್ರಯುಕ್ತ ದೇರಳಕಟ್ಟೆ ಯೇನೆಪೊಯ ವೈದ್ಯಕೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಭಾನುವಾರದಂದು ಮರ್ಧಾಳ ಮದ್ರಸ ಹಾಲ್‌ನಲ್ಲಿ ನಡೆಯಿತು. ಈ ಶಿಬಿರದಲ್ಲಿ ಮಕ್ಕಳ ತಜ್ಞರು, ಎಲುಬು ತಜ್ಞರು, ಕಣ್ಣಿನ ತಜ್ಞರು ಸೇರಿದಂತೆ ಸಾಮಾನ್ಯ ವಿಭಾಗಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡು ವಿವಿಧ ರೀತಿಯ ಚಿಕಿತ್ಸೆಗಳನ್ನು ಪಡೆದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ತಂಙಳ್, ಉರೂಸ್ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್, ಖತೀಬರಾದ ಉಮರ್ ಸಖಾಫಿ ಕಂಬಳಬೆಟ್ಟು, ಯೇನೆಪೋಯ ವಿಶ್ವವಿದ್ಯಾಲಯದ ಎಂಎಸ್‌ಡಬ್ಲ್ಯೂ ವಿಭಾಗದ ಅಬ್ದುಲ್ ರಝಾಕ್, ಯೂನುಸ್ ಕೋಡಿಕಂಡ ಮೊದಲಾದವರು ಉಪಸ್ಥಿತರಿದ್ದರು. ಹೈದರ್ ಮರ್ಧಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





