ಉಚ್ಚಿಲ ಬೋವಿ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ

ಉಳ್ಳಾಲ,ಫೆ.12 : ಸೋಮಶ್ವರ ಉಚ್ಚಿಲದ ಬೋವಿ ಶಾಲೆಯಲ್ಲಿ ಸೋಮವಾರ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಹಾಗೂ ಕೃಷ್ಣ ನಾಯಕ್ ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸಿದರು.
ಈಗಾಗಲೇ ಬೆಳ್ಮ, ಕೊಣಾಜೆ, ಕುರ್ನಾಡ್, ಬಾಳೆಪುಣಿ, ನರಿಂಗಾನ ಸಹಿತ ಇತರ ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿಷೇಧ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜು, ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕವಾಗಿ ನಡೆಸುವ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
ಬೋವಿ ಶಾಲೆಯ ವಿದ್ಯಾರ್ಥಿಗಳಿಗೆ ಭುವಿ ಸಾಕ್ಷ್ಯಚಿತ್ರ ಪ್ರದರ್ಶಿಸಿ, ಸ್ವಚ್ಛತೆಯ ಪಾಠ ಮಾಡಿ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪ್ರತಿಜ್ಞೆ ಬೋಧಿಸಿದರು. ಉತ್ತಮ ಕಾರ್ಯಕ್ರಮದಿಂದ ಪುಳಕಿತರಾದ ಶಿಕ್ಷಕರು ಹಾಗೂ ಆಡಳಿತಾಧಿಕಾರಿ ಇನ್ನೊಮ್ಮೆ ಇದೇ ಕಾರ್ಯಕ್ರಮ ನಡೆಸಲು ಅವಕಾಶ ನೀಡುವ ಬಗ್ಗೆ ಭರವಸೆ ನೀಡಿದರು. ಬಳಿಕ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಪ್ರತಿಜ್ಞೆ ಬೋಧಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ರಾಘವ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯರಾದ ಶಿಲ್ಪಕಲಾ, ಕವಿತಾ, ಸಹಶಿಕ್ಷಕರಾದ ರಜನಿ, ಗಾಯತ್ರಿ ಹಾಗೂ ಪೂರ್ಣಿಮಾ ಸಹಕರಿಸಿದರು.





