Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅರಣ್ಯ ಸಂರಕ್ಷಣೆಗೆ ತೊಡಕಾಗುತ್ತಿರುವ...

ಅರಣ್ಯ ಸಂರಕ್ಷಣೆಗೆ ತೊಡಕಾಗುತ್ತಿರುವ ಸಾಮಾಜಿಕ ಜಾಲತಾಣಗಳು!

►10 ಸಾವಿರ ಎಕರೆ ಅರಣ್ಯ ಕಾಪಾಡಲು ಬರೇ 10 ಗಾರ್ಡ್‌ಗಳು ►ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ ಅರಣ್ಯ ಇಲಾಖೆ

ಹಾರಿಸ್ ಹೊಸ್ಮಾರ್ಹಾರಿಸ್ ಹೊಸ್ಮಾರ್13 Feb 2017 8:30 PM IST
share
ಅರಣ್ಯ ಸಂರಕ್ಷಣೆಗೆ ತೊಡಕಾಗುತ್ತಿರುವ ಸಾಮಾಜಿಕ ಜಾಲತಾಣಗಳು!

ಮೂಡುಬಿದಿರೆ,ಫೆ.13 : ಅರಣ್ಯ ಸಂರಕ್ಷಣೆಗೆಂದು ಇರುವ ಅರಣ್ಯ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಗಸ್ತು ತಿರುಗಾಡಿದರೆ ಅವರ ಹಿಂದಿನಿಂದಲೇ ಅವರ ಚಲನವಲನಗಳನ್ನು ವರದಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಆಧುನಿಕ ಖದೀಮರ ತಂಡ ಇತ್ತೀಚಿಗೆ ಸಕ್ರಿಯವಾಗಿ ಕಾರ್ಯಚರಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ರಮ ಮರ ಸಾಗಾಟಕ್ಕಾಗಿ ಹಾಗೂ ಟಿಂಬರ್ ಮಾಫಿಯಾದ ಧಣಿಗಳ ಹಿತ ಕಾಯುವುದಕ್ಕೆಂದೇ ಹುಟ್ಟಿಕೊಂಡಿರುವ ಇಂತಹ ವಾಟ್ಸಾಪ್ ಗುಂಪುಗಳ ಸಹಾಯದಿಂದಲೇ ಅಧಿಕಾರಿಗಳು ಎಲ್ಲೆಲ್ಲಿದ್ದಾರೆಂಬ ಮಾಹಿತಿ ಅಕ್ರಮ ಮರ ಸಾಗಾಟಗಾರರಿಗೆ ತಲುಪುವಂತಾಗುತ್ತಿದ್ದು, ಅಕ್ರಮಗಳಿಗೆ ಬ್ರೇಕ್ ಹಾಕುವುದಕ್ಕೆ ಅಧಿಕಾರಿಗಳು ಸಾಕಷ್ಟು ಶ್ರಮ ಪಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅರಣ್ಯ ಇಲಾಖೆಯ ಕುಂದಾಪುರ ಉಪವಿಭಾಗದ ಮೂಡುಬಿದಿರೆ ವಲಯದಲ್ಲಿ ಬರೊಬ್ಬರಿ 10 ಸಾವಿರ ಎಕರೆ ಅರಣ್ಯ ಪ್ರದೇಶವಿದ್ದು ಈ ಹಿಂದೆಯೇ ಸುಮಾರು 8 ಸಾವಿರ ಎಕರೆ ಅರಣ್ಯ ಪ್ರದೇಶ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರವಾಗಿದೆ. ಕಾರ್ಕಳ, ಮುಲ್ಕಿ, ಮೂಡುಬಿದಿರೆ ಹೋಬಳಿಗಳಿಂದ ಸುತ್ತಲೂ ಆವೃತ್ತವಾಗಿರುವ ಈ ವ್ಯಾಪ್ತಿಯಲ್ಲಿ ಅರಣ್ಯ ಸಂರಕ್ಷಕರಾಗಿ ಇರುವುದು 10 ಮಂದಿ ಮಾತ್ರ. ಅಷ್ಟಕ್ಕೂ ಈ ಅರಣ್ಯ ಪ್ರದೇಶಗಳು 79 ಗ್ರಾಮಗಳಲ್ಲಿ ಹರಡಿಕೊಂಡಿವೆ.

ಮೂಜಿಮಲೆ, ಹುರಾಬೆ, ಕೇರ, ಪಣಂಬೇರಿ ಒಟ್ಟು ಮೂರು ಮೀಸಲು ಅರಣ್ಯ ಪ್ರದೇಶಗಳು ಈ ವಲಯದಲ್ಲಿದ್ದು, ಎಲ್ಲಾ ಗ್ರಾಮಗಳಲ್ಲೂ ಸಾಕಷ್ಟು ಡಾಂಬಾರು ರಸ್ತೆಯ ವ್ಯವಸ್ಥೆ ಇದೆ. ಅಕ್ರಮ ಮರ ಸಾಗಾಟಕ್ಕೆ ಹೇಳಿ ಮಾಡಿಸಿದಂತಹ ವ್ಯವಸ್ಥೆಗಳಿವೆ. ಆದರೂ ಅರಣ್ಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಆದರೆ 79 ಗ್ರಾಮಗಳಿಗೆ ಇರುವ 10 ಗಾರ್ಡ್‌ಗಳ ಸಂಖ್ಯೆಯನ್ನು ಗಮನಿಸಿದರೆ ಒಬ್ಬೊಬ್ಬರಿಗೂ ಸುಮಾರು 8 ಗ್ರಾಮಗಳ ಹೊಣೆ ಇದೆ. ಕಂದಾಯ ಇಲಾಖೆಯಲ್ಲಿ ಗ್ರಾಮಕ್ಕೊಬ್ಬರಂತೆ ಅಧಿಕಾರಿಗಳು ಆ ಇಲಾಖೆಯಿಂದ ಇರುತ್ತಾರೆ. ಹಗಲಿರುಳು ಸಂರಕ್ಷಣೆಯ ಹೊಣೆಹೊತ್ತುಕೊಳ್ಳಬೇಕಾದ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ.

ಇಷ್ಟೊಂದು ದೊಡ್ಡ ವ್ಯಾಪ್ತಿಯಲ್ಲಿ ಮೀಸಲು ಅರಣ್ಯಗಳು ಸೇರಿದಂತೆ ಅರಣ್ಯ ಪ್ರದೇಶವಿರುವುದರಿಂದ ಅರಣ್ಯ ಚೆಕ್ ಪೋಸ್ಟ್‌ಗಳ ಅಗತ್ಯ ಇಲ್ಲಿ ಕಂಡುಬರುತ್ತದೆ. ಒಂದೊಮ್ಮೆ ಚೆಕ್‌ಪೋಸ್ಟ್‌ಗಳ ನಿರ್ಮಾಣವಾದಲ್ಲಿ ಅಲ್ಲಿ ನಿರಂತರ ಸಿಬ್ಬಂದಿಗಳ ಇರುವಿಕೆಯಿಂದ ಅಕ್ರಮ ಮರ ಸಾಗಾಟಗಳಿಗೆ ಸುಲಭವಾಗಿ ಬ್ರೇಕ್ ಹಾಕಬಹುದಾಗಿದೆ.

ಸರಕಾರವು ಅಕೇಶಿಯಾದ ಎರಡು ಪ್ರಭೇದಗಳು ಹಾಗೂ ಕೆಲವು ಹಣ್ಣುಗಳಿಗೆ ಸಂಬಂಧಿಸಿದ ಮರಗಳ ಕಡಿದು ಸಾಗಾಟ ಮಾಡುವುದಕ್ಕೆ ಅನುಮತಿಯ ವಿನಾಯಿತಿ ನೀಡಿದ ಮೇಲೆ ಅರಣ್ಯ ಇಲಾಖೆಯ ಕೋರಿಕೆಯ ಮೇರೆಗೆ ಮಾವಿನ ಮರಕ್ಕಿದ್ದ ವಿನಾಯಿತಿಯನ್ನು ವಾಪಾಸು ಪಡೆದುಕೊಂಡಿತ್ತು. ಮುಂದಿನ ದಿನಗಳಲ್ಲಿ ಕೇರಳ ರಾಜ್ಯದ ಮಾದರಿಯಲ್ಲಿ ಹಲಸು, ಹೆಬ್ಬಲಸು ಹಾಗೂ ಮಾವುಗಳಂತಹ ಬೆಲೆಬಾಳುವ ಮರಗಳ ಸಾಗಾಟಕ್ಕೆ ಅನುಮತಿ ಪಡೆಯುವುದರಿಂದ ವಿನಾಯಿತಿ ಸಿಗುವ ನಿರೀಕ್ಷೆಯಿದೆ.

ಮೂಡುಬಿದಿರೆ ವಲಯದಲ್ಲಿ 2015-16ನೇ ವರ್ಷದಲ್ಲಿ ಅಕ್ರಮ ಮರಸಾಗಾಟದ 79 ಪ್ರಕರಣಗಳು ದಾಖಲಾಗಿದ್ದು, 2016-17ರ ಸಾಲಿನಲ್ಲಿ ಇದುವರೆಗೆ 63 ಪ್ರಕರಣಗಳನ್ನು ಅರಣ್ಯ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆ ಬಗೆಗೆ ಹಾಗೂ ಅವುಗಳ ಅಕ್ರಮ ಬಳಕೆಗಿರುವ ಕಾನೂನು, ಕಾಯ್ದೆಗಳ ಬಗ್ಗೆ ವ್ಯಾಪಕ ಜಾಗೃತಿ ಇದ್ದು, ನಮ್ಮ ವ್ಯಾಪ್ತಿಯಲ್ಲಿ ಮೀಸಲು ಅರಣ್ಯಗಳು ಹಾಗೂ ಇತರ ಅರಣ್ಯಗಳಿಂದ ಅಕ್ರಮ ಮರ ಕಡಿಯುವ ಅಥವಾ ಸಾಗಾಟ ಮಾಡುವ ಪ್ರಕರಣಗಳು ನಡೆಯುವುದಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಗಲು ರಾತ್ರಿಗಳಲ್ಲಿ ನಿರಂತರ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.

-ದಿನೇಶ್ ಜಿ.ಡಿ., ವಲಯ ಅರಣ್ಯ ಸಂರಕ್ಷಣಾಧಿಕಾರಿ

ಮೂಡುಬಿದಿರೆ ವಲಯದಲ್ಲಿದ್ದ ಚೆಕ್‌ಪೋಸ್ಟ್‌ಗಳನ್ನು ಈ ಹಿಂದೆ ತೆರವುಗೊಳಿಸಿದ್ದು, ಈ ಬಗ್ಗೆ ಅರಣ್ಯ ಇಲಾಖೆಯಲ್ಲಿ ವಿಚಾರಿಸಿದಾಗ ಚೆಕ್‌ಪೋಸ್ಟ್ ಬೇಕೇನಿಸುವಷ್ಟು ಅಕ್ರಮಗಳು ಅಥವಾ ಕೇಸು ದಾಖಲಾತಿ ಆಗುತ್ತಿಲ್ಲ ಎಂಬ ಕಾರಣ ನೀಡಿ ತೆರವುಗೊಳಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಸುಮಾರು 3ರಿಂದ ನಾಲ್ಕು ಕಡೆಗಳಲ್ಲಿ ಮತ್ತೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ 24 ಗಂಟೆಗಳ ಕಾಲ ನಿರಂತರ ಸಿಬ್ಬಂದಿಗಳಿಂದ ತಪಾಸಣೆ ನಡೆಸುವುದು ಅನಿವಾರ್ಯವಾಗಿದೆ. ವ್ಯಾಪಕವಾಗಿ ಈ ಪ್ರದೇಶಗಳಿಂದ ಮರಗಳ್ಳತನ ನಡೆಯುತ್ತಿದ್ದು, ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳೇ ಇದರಲ್ಲಿ ಭಾಗಿಯಾಗುತ್ತಿದ್ದಾರೆ.

-ಸುದತ್ತ ಜೈನ್, ಹೋರಾಟಗಾರ, ಕಾರ್ಮಿಕ ಮುಖಂಡ

(ಉಪವಾಸ ಸತ್ಯಾಗ್ರಹ ನಡೆಸಿ ಚೆಕ್‌ಪೋಸ್ಟ್ ಆಗಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವರು.)

share
ಹಾರಿಸ್ ಹೊಸ್ಮಾರ್
ಹಾರಿಸ್ ಹೊಸ್ಮಾರ್
Next Story
X