ಜಾನುವಾರು ಕಳ್ಳ ಸಾಗಾಣಿಕೆ: ಕರಡು ಶಿಫಾರಸು ಸಿದ್ಧ- ಕೇಂದ್ರ

ಹೊಸದಿಲ್ಲಿ,ಫೆ.13: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರುಗಳ ಕಳ್ಳಸಾಗಾಣಿಕೆಯನ್ನು ನಿಲ್ಲಿಸಲು ವ್ಯವಸ್ಥೆಯೊಂದನ್ನು ರೂಪಿಸಲು ರಚಿಸಲಾಗಿದ್ದ ಸಮಿತಿಯು ತನ್ನ ಕರಡು ಶಿಫಾರಸುಗಳನ್ನು ಸಿದ್ಧಗೊಳಿಸಿದೆ ಎಂದು ಕೇಂದ್ರವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.
ಸಮಿತಿಯ ಕರಡು ಶಿಫಾರಸುಗಳ ವಿಶ್ಲೇಷಣೆಗಾಗಿ ಪಶ್ಚಿಮ ಬಂಗಾಲವು ಸ್ವಲ್ಪ ಸಮಯಾವಕಾಶವನ್ನು ಕೋರಿದೆ ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ತಿಳಿಸಿದರು.
ಈ ಬಗ್ಗೆ ವಿಚಾರಣೆಯನ್ನು ಎ.3ಕ್ಕೆ ನಿಗದಿಗೊಳಿಸಲಾಗಿದೆ.
Next Story





