ಪ್ರತ್ಯೇಕ ಪ್ರಕರಣ: ನಾಲ್ವರ ಆತ್ಮಹತ್ಯೆ
ಪಡುಬಿದ್ರಿ, ಫೆ.13: ಬಡಾ ಎರ್ಮಾಳ್ ಗ್ರಾಮದ ಪಡು ನಿವಾಸಿ ರಮೇಶ್ ಕೋಟ್ಯಾನ್ (60) ಎಂಬವರು ವೈಯಕ್ತಿಕ ಕಾರಣದಿಂದ ಜೀವನ ದಲ್ಲಿ ಜಿಗುಪ್ಸೆಗೊಂಡು ಫೆ.12ರಂದು ರಾತ್ರಿ ವೇಳೆ ಕೋಣೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ:ವೈಯಕ್ತಿಕ ಕಾರಣದಿಂದ ಮನನೊಂದ ಶಿರ್ವದ ಕೆ. ಕೋಯಾ ಎಂಬವರ ಮಗ ರಫೀಕ್(28) ಎಂಬವರು ಫೆ.11ರಂದು ಬೆಳಗ್ಗೆ ಮನೆಯ ಮಹಡಿಯ ಕೋಣೆಯ ಕಬ್ಬಿಣದ ಹುಕ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಸಂಜೀವ ಶೆಟ್ಟಿ(68) ಎಂಬವರು ಫೆ.12ರಂದು ರಾತ್ರಿ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಹೆಜಮಾಡಿ ಶಿವನಗರ ಜೂನಿಯರ್ ಕಾಲೇಜ್ ಬಳಿಯ ನಿವಾಸಿ ವಸಂತ ಪೂಜಾರಿ(65) ಎಂಬವರು ಫೆ.11ರಂದು ಮನೆಯಿಂದ ಹೋದವರು ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಎದುರಿನ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹ ಫೆ.13ರಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







