ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದ ಮಂಗಳೂರಿನ ಸುಪ್ರಭಾ

ಮಂಗಳೂರು, ಫೆ. 13: ಮೂಲತ: ಮಂಗಳೂರಿನ ಸದ್ಯ ಬೆಂಗಳೂರಿನ ಆರ್.ವಿ. ಕಾಲೇಜಿನ ಮೂರನೆ ವರ್ಷದ ಕೆಮಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸುಪ್ರಭಾ ಕೆ. ಗಣರಾಜ್ಯೋತ್ಸವ ಕ್ಯಾಂಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ರಚಿಸಿ ಪ್ರಧಾನಿಯವರಿಗೆ ಹಸ್ತಾಂತರಿಸಿದರು. ಸುಪ್ರಭಾ ಪ್ರತಿಭೆಯನ್ನು ಕೊಂಡಾಡಿದ ಮೋದಿಯವರು ಆಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವ ಕ್ಯಾಂಪ್‌ಗೆ ಆರ್. ವಿ. ಕಾಲೇಜಿನಿಂದ ಏಕೈಕ ಪ್ರತಿನಿಧಿಯಾಗಿದ್ದ ಸುಪ್ರಭ ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಕರುಣಾಕರ ಕಾನಂಗಿ (ಕಲ್ಪಿತಾ ಮಂಗಳೂರು) ಸುಜಾತಾ ಕೆ. ದಂಪತಿಯ ಪುತ್ರಿ. ಕೆನರಾ ಹೈಸ್ಕೂಲ್ ಉರ್ವದಲ್ಲಿ ಪ್ರಾಥಮಿಕ ಶಿಕ್ಷಣ, ಮಹೇಶ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ.
Next Story





