Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಟೋಲ್ ಸಂಗ್ರಹ ವಿರುದ್ದ ಮುಲ್ಕಿಯಲ್ಲಿ...

ಟೋಲ್ ಸಂಗ್ರಹ ವಿರುದ್ದ ಮುಲ್ಕಿಯಲ್ಲಿ ಬೃಹತ್ ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ13 Feb 2017 11:37 PM IST
share
ಟೋಲ್ ಸಂಗ್ರಹ ವಿರುದ್ದ ಮುಲ್ಕಿಯಲ್ಲಿ ಬೃಹತ್ ಪ್ರತಿಭಟನೆ

ಮುಲ್ಕಿ, ಫೆ.13: ರಾಷ್ತ್ರೀಯ ಹೆದ್ದಾರಿ 66 ಹೆಜಮಾಡಿಯಲ್ಲಿ ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸದೇ ಟೋಲ್ ಸಂಗ್ರಹ ಆರಂಭಿಸಿದ್ದರ ವಿರುದ್ದ ಉಡುಪಿ ಜಿಲ್ಲೆ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪೂರಕವಾಗಿ ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ರಾಷ್ತ್ರೀಯ ಹೆದ್ದಾರಿ ತಡೆ ಮಾಡಿ ಸುಮಾರು 15 ನಿಮಿಷ ಪ್ರತಿಟನೆ ನಡೆಯಿತು.

      ಪ್ರತಿಟನಾಕಾರರನ್ನು ಉದ್ದೇಶಿಸಿ ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ರಾಷ್ತ್ರೀಯ ಹೆದ್ದಾರಿಯ ಗುತ್ತಿಗೆದಾರರು ದಕ್ಷಿಣಕನ್ನಡ ಜಿಲ್ಲೆಯ ಗಡಿಪ್ರದೇಶವಾದ ಮೂಲ್ಕಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸದೆ ಅಧಂಬರ್ಧ ಕಾಮಗಾರಿ ನಡೆಸಿ ಹೆಜಮಾಡಿಯಲ್ಲಿ ಹೆದ್ದಾರಿಯಲ್ಲಿ ಟೋಲ್ ಗೇಟ್ ಆರಂಭಿಸಿದ್ದಾರೆ.ಮೂಲ್ಕಿ ಪರಿಸರದ 20 ಕಿ.ಮಿ ವರೆಗೆ ಟೋಲ್ ಸಂಗ್ರಹದಲ್ಲಿ ವಾಹನಗಳಿಗೆ ವಿನಾಯಿತಿ ನೀಡಬೇಕು ಹಾಗೂ ಬಾಕಿಯುಳಿದ ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಟನೆ ನಡೆಸುವುದಾಗಿ ಹೇಳಿದರು.ಮೂಲ್ಕಿಯಿಂದ ಕೇವಲ 2 ಕಿ ಮಿ ದೂರದಲ್ಲಿ ಹೆಜಮಾಡಿಯಲ್ಲಿ ಹಾಗೂ 10 ಕಿ ಮಿ ದೂರದಲ್ಲಿ ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ಆರಂಗೊಂಡಿದ್ದು ಇದರಿಂದ ಮೂಲ್ಕಿ ಪರಿಸರದವರಿಗೆ ತುಂಬಾ ತೊಂದರೆಯಾಗಿದೆ ಇದರಿಂದ ಮೂಲ್ಕಿ ಪರಿಸರದವರಿಗೆ ಟೋಲ್ ನಲ್ಲಿ ವಿನಾಯಿತಿ ನೀಡಬೇಕು ಇಲ್ಲದಿದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಟನೆ ಮಾಡಲಾಗುವುದೆಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಹೇಳಿದರು.ಕಿನ್ನಿಗೋಳಿಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಸಬೆಯನ್ನುದ್ದೇಶಿಸಿ ಮಾತನಾಡಿದರು. ಬೆಳಿಗ್ಗೆ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಸುಮಾರು 15 ನಿಮಿಷಗಳ ಕಾಲ ಪ್ರತಿಟನಾಕಾರರರು ಹೆದ್ದಾರಿಯಲ್ಲಿ ಕುಳಿತು ವಾಹನ ಸಂಚಾರ ಸ್ತಗಿತಗೊಳಿಸಿ ಪ್ರತಿಟನೆ ಮಾಡಲಾಯಿತು.ಒಂದು ಹಂತದಲ್ಲಿ ಪ್ರತಿಟನಾಕಾರರು ಹೆದ್ದಾರಿಯನ್ನು ಬಿಟ್ಟು ಕದಲಲಲು ನಿರಾಕರಿಸಿದ್ದರಿಂದ ಪೊಲೀಸರು ಬಲವಂತವಾಗಿ ಪ್ರತಿಟನಾಕರರನ್ನು ಸ್ಥಳದಿಂದ ಎಬ್ಬಿಸಿದರು.ಮೂಲ್ಕಿಯ ರಿಕ್ಷಾ,ಕಾರು,ಬಸ್ಸು ಚಾಲಕ ಮಾಲಕರು ಪ್ರತಿಟನಾ ಸಬೆಯಲ್ಲಿ ಬಾಗವಹಿಸಿದ್ದರು.ಮೂಲ್ಕಿಯ ಕಾರು ಚಾಲಕ-ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ಮೂಲ್ಕಿ ನಗರ ಪಂಚಾಯತ್ ಸದಸ್ಯರುಗಳಾದ ಪುತ್ತು ಬಾವು,ಪುರುಷೋತ್ತಮ,ಬಶೀರ್ ಕುಳಾಯಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಅಶೋಕ್ ಪೂಜಾರ ಮತ್ತಿತರಿದ್ದರು.

ಮೂಲ್ಕಿ ಪೋಲಿಸ್ ಠಾಣಾಧಿಕಾರಿ ಅನಂತ ಪದ್ಮನಾ ನೇತ್ರತ್ವದಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಎರ್ಪಡಿಸಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಮೀಸಲು ಪೋಲಿಸ್ ಪಡೆಯು ಬೆಳಗ್ಗಿನಿಂದ ಬಂದೋ ಬಸ್ತ್ ಕಾರ್ಯದಲ್ಲಿ ಬಾಗಿಯಾಗಿತ್ತು. ಬಳಿಕ ಪ್ರತಿಟನಾಕಾರರು ಹೆಜಮಾಡಿ ಟೋಲ್‌ಗೆಟ್ ಬಳಿ ಮನವಿ ಸಲ್ಲಿಸಿದರು.

ಪೆ.25ರವರೆಗೆ ತಾತ್ಕಾಲಿಕ ರಿಯಾಯಿತಿ

ಹೆಜಮಾಡಿ ಟೋಲಿನಿಂದ ಸುಮಾರು 5ಕಿಮೀರವರೆಗಿನ ವಾಹನಗಳಿಗೆ ಪೆ.25ರವರೆಗೆ ರೀಯಾಯಿತಿ ದೊರಕಿದೆ ಎಂದು ಹೋರಾಟಗಾರ ಧನಂಜಯಮಟ್ಟು ಹೇಳಿದ್ದಾರೆ. ಅವರು ಟೋಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮದ್ಯಮದವರಿಗೆ ತಿಳಿಸಿದ್ದಾರೆ.ಪೆ.25ರ ಬಳಿಕ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಟೋಲಿನ ಬಗ್ಗೆ ಸೂಕ್ತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮುಲ್ಕಿಯಲ್ಲಿ ಬಸ್ಸುಗಳು ಬಂದ್

ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಟೋಲಿನ ಪ್ರತಿಟನೆ ಕಾವೇರುತ್ತಿದ್ದಂತೆ ದ.ಕ. ಜಿಲ್ಲೆಯ ಗಡಿಪ್ರದೇಶವಾದ ಮೂಲ್ಕಿಯಲ್ಲೂ ಪ್ರತಿಟನೆ ಹಾಗೂ ಆಂಶಿಕ ಬಂದ್ ನಡೆಯಿತು. ಮಂಗಳೂರು ಉಡುಪಿ ತಡೆರಹಿತ ಬಸ್ಸುಗಳು ಹಾಗೂ ಕಿನ್ನಿಗೋಳಿ,ಕಟೀಲು ಹಳೆಯಂಗಡಿಗೆ ಹೋಗುವ ಬಸ್ಸುಗಳು ಸಂಪೂರ್ಣ ಸಂಚಾರ ನಿಲ್ಲಿಸಿದ್ದವು.ಅಂಗಡಿಮುಗ್ಗಟ್ಟುಗಳು ತೆರೆದಿದ್ದವು. ಬ್ಯಾಂಕುಗಳಲ್ಲಿ ವ್ಯವಹಾರ ಕಡಿಮೆಯಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X