ಉದ್ಯಮಿ ಜತೆ ಜಗಳಕ್ಕಿಳಿದ ಅಮೆರಿಕ ಅಧ್ಯಕ್ಷ
ಟ್ರಂಪ್ ಇನ್ನೊಂದು ದಾಖಲೆ

ನ್ಯೂಯಾರ್ಕ್, ಫೆ.14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅಮೆರಿಕದ ಉದ್ಯಮಿ ಹಾಗೂ ಟಿವಿ ಮಾಲಕ ಮಾರ್ಕ್ ಕ್ಯುಬೆನ್ ಹಾಗೂ ಟ್ರಂಪ್ ಜತೆಗೆ ಟ್ವಿಟ್ಟರ್ ಸಮರ ನಡೆಯುತ್ತಿರುವುದು ಇದನ್ನು ಬಹಿರಂಗಪಡಿಸಿದೆ.
ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ಕ್ಯುಬೆಲ್ ಅವರು ಫೋರ್ಟ್‌ವರ್ತ್ ಸ್ಟಾರ್ ಟೆಲಿಗ್ರಾಂ ಪತ್ರಿಕೆಯ ಲೇಖನವೊಂದರಲ್ಲಿ ಟ್ರಂಪ್ ಆಡಳಿತದಲ್ಲಿ ಪತ್ರಿಕೆಗಳ ಸಿಇಓಗಳು ಹೇಗೆ ವರ್ತಿಸಬೇಕು ಎಂದು ವಿವರಿಸಿದ್ದರು. ತಕ್ಷಣದ ರಾಜಕೀಯ ಲಾಭಗಳಿಗೆ ಆಸೆಪಟ್ಟು ಟ್ರಂಪ್ ಅವರ ಜತೆ ಸ್ನೇಹಶೀಲರಾಗಿರಬೇಡಿ ಎಂದು ಎಚ್ಚರಿಕೆ ನೀಡಿದ್ದರು. "ಅದು ಸರಿ ಎನಿಸುತ್ತದೆಯೇ? ಮೊದಲು ಅಮೆರಿಕದ ನಾಗರಿಕರಾಗಿ" ಎಂದು ಕ್ಯುಬೆಲ್ ಬರೆದಿದ್ದರು. ಇದು ಟ್ರಂಪ್ ಅವರನ್ನು ಕೆರಳಿಸಿದ್ದು, ಕ್ಯುಬೆನ್ ಅವರು ಅಸಂತುಷ್ಟ ಮಾಜಿ ಬೆಂಬಲಿಗ ಎಂದು ಟ್ವೀಟ್ ಮಾಡಿದರು.
"ನನಗೆ ಮಾರ್ಕ್ ಕ್ಯುಬೆನ್ ಅವರನ್ನು ಚೆನ್ನಾಗಿ ಗೊತ್ತಿದೆ, ಹಲವು ಸಂದರ್ಭಗಳಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಅದನ್ನು ತೆಗೆದುಕೊಳ್ಳಲು ನಾನು ಮುಂದಾಗಿಲ್ಲ. ಅಧ್ಯಕ್ಷರ ವಿರುದ್ಧ ಪ್ರಚಾರ ಕೈಗೊಳ್ಳುವಷ್ಟು ಚತುರರಲ್ಲ" ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ತಮ್ಮಿಬ್ಬರ ನಡುವೆ ನಡೆದ ಪತ್ರ ವ್ಯವಹಾರವನ್ನು ಬಹಿರಂಗಪಡಿಸಿದ ಕ್ಯುಬೆನ್, ತಾವು ಯಾವ ಕಾರಣಕ್ಕಾಗಿ ಇದೀಗ ಟ್ರಂಪ್ ಅವರನ್ನು ಬೆಂಬಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅವರನ್ನು ಮತ್ತೂ ಛೇಡಿಸಿ, ಟ್ರಂಪ್ ಆಡಳಿತ ನಡೆಸುವ ಬದಲು ಟ್ವೀಟ್ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
I know Mark Cuban well. He backed me big-time but I wasn't interested in taking all of his calls.He's not smart enough to run for president!
— Donald J. Trump (@realDonaldTrump) February 12, 2017
— Mark Cuban (@mcuban) February 12, 2017
How soon they forget .... pic.twitter.com/VXcfnjj4qX
— Mark Cuban (@mcuban) February 12, 2017
I don't know. But isn't it better for all of us that he is tweeting rather than trying to govern ? https://t.co/953MuEdfeu
— Mark Cuban (@mcuban) February 12, 2017







