ನೋಟು ರದ್ದತಿಯ ಕಾಲದಲ್ಲಿ ಈತ ಗರ್ಲ್ ಫ್ರೆಂಡ್ ಗೆ ನೀಡಿದ ಉಡುಗೊರೆ ನೋಡಿ !
ಅದಕ್ಕೆ ಪ್ರತಿಯಾಗಿ ಈತ ಪಡೆದ ಬಹುಮಾನ ಏನು ಗೊತ್ತೇ ?
.jpeg)
ಮುಂಬೈ, ಫೆ.14: ಈ ವೆಲಂಟೈನ್ಸ್ ದಿನದಂದು ಮುಂಬೈ ನಗರದ ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ನೀಡ ಬಯಸಿದ ಉಡುಗೊರೆ ಏನು ಗೊತ್ತೇ ? ಆತ ತನ್ನ ಕಾರನ್ನು ಹೊಸ 2000 ರೂಪಾಯಿ ನೋಟುಗಳಿಂದ ಅಲಂಕರಿಸಿ ತನ್ನ ಮನದನ್ನೆಯ ಮನವನ್ನು ಇನ್ನಷ್ಟು ಗೆಲ್ಲಲು ಇನ್ನಿಲ್ಲದ ಕಸರತ್ತು ಮಾಡಿದ್ದ. ಆದರೆ ಇದಕ್ಕಾಗಿ ಆತ ಬಂಧನದ ಉಡುಗೊರೆ ಪಡೆಯಬೇಕಾಯಿತು.
ಆತ ತನ್ನ ಈ ನೋಟುಗಳಿಂದ ಅಲಂಕೃತವಾದ ಕಾರಿನಲ್ಲಿ ರಸ್ತೆಗಿಳಿದಿದ್ದೇ ತಡ ಮುಂಬೈ ಜನರು ಸ್ಥಂಭೀಭೂತರದರು. ಪೊಲೀಸರೂ ಅವಾಕ್ಕಾಗಿ ಆತನನ್ನು ಕೂಡಲೇ ಬಂಧಿಸಿದ್ದರು.ಆತ ತನ್ನ ಪ್ರಿಯತಮೆಗೆ ಈ ಕಾರನ್ನು ವೆಲಂಟೈನ್ಸ್ ಡೇ ಯಂದು ಉಡುಗೊರೆ ನೀಡ ಬಯಸಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ನೋಟು ರದ್ದತಿಯ ಕಾಲದಲ್ಲಿ ಈ ಅಪರೂಪದ ಉಡುಗೊರೆ ನೀಡಲು ಹೊರಟ ಯುವಕನ ಗುರುತನ್ನು ಪೊಲೀಸರು ಹೊರಗೆಡಹಿಲ್ಲ.
Next Story





