ಯಾಂಬುನಲ್ಲಿ ಮೃತನಾದ ಭಾರತೀಯನ ಮೃತದೇಹ ಊರಿಗೆ

ಯಾಂಬು,ಫೆ. 14: ಜನವರಿ 18ಕ್ಕೆ ಯಾಂಬುವಿನ ವಾಸ ಸ್ಥಳದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಕಾಸರಗೋಡು ನೀಲೇಶ್ವರದ ಎಂ,ಎಸ್.ಸಾಬುರಾಜ್ ಮಾಧವ್‌ರ ಮೃತದೇಹವನ್ನು ಸೋಮವಾರ ಸಂಜೆ ಜಿದ್ದ ವಿಮಾನ ನಿಲ್ದಾಣದ ಮೂಲಕ ಊರಿಗೆ ತಲುಪಿಸಲಾಗಿದೆ. ಮೃತದೇಹದ ಸಂಸ್ಕಾರ ಕಾರ್ಯ ಮಂಗಳವಾರ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದರು. ಸಾಬುರಾಜ್ ಯಾಂಬುನ ಅಲ್ ದೋಸರಿ ಕಂಪೆನಿ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.
Next Story





