ವಿಶೇಷ ವಿಧಾನಸಭಾ ಅಧಿವೇಶನ ಕರೆಯಲು ಆಗ್ರಹ - ಸ್ಟಾಲಿನ್

ಚೆನ್ನೈ,ಫೆ. 14: ತಮಿಳ್ನಾಡಿನ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗುವ ಪ್ರಶ್ನೆಯೇ ಇಲ್ಲ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಹಿಂಬಾಗಿಲಿನಿಂದ ಅಧಿಕಾರವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ. ವಿಶೇಷ ವಿಧಾನಸಭೆ ಅಧಿವೇಶನ ಕರೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಸರಕಾರ ರಚಿಸುವ ವಿಷಯದಲ್ಲಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು. ವಿಶೇಷ ವಿಧಾನಸಭೆ ಅಧಿವೇಶನ ಕರೆದು ಬಹುಮತವನ್ನು ಸಾಬೀತುಪಡಿಸಲು ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಯಾರಿಗೂ ಡಿಎಂಕೆ ಬೆಂಬಲ ನೀಡುವುದಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಶಶಿಕಲಾರ ವಿರುದ್ಧ ಬಂದಿರುವ ತೀರ್ಪು ಭ್ರಷ್ಟಾಚಾರದ ವಿರುದ್ಧವಿರುವ ಒಂದು ಪಾಠವಾಗಿದೆ. ರಾಜಕೀಯದಲ್ಲಿ ಇನ್ನುಯಾರೂ ಭ್ರಷ್ಟಾಚಾರ ಮಾಡದೆ ಸಾಮಾನ್ಯ ಜೀವನ ನಡೆಸಬೇಕೆಂದು ಅವರು ಹೇಳಿದರೆಂದು ವರದಿಯಾಗಿದೆ.
Next Story





