ಬೈಕಂಪಾಡಿ: ಹಳೆ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ

ಮಂಗಳೂರು,ಫೆ.14: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಮುಸ್ಲಿಂ) ಅಂಗರಗುಂಡಿ- ಬೈಕಂಪಾಡಿ ಇದರ ನೂತನ ಹಳೆ ವಿದ್ಯಾರ್ಥಿ ಸಂಘ ಸ್ಥಾಪನಾ ಸಮಾರಂಭ ಇತ್ತೀಚೆಗೆ ಶಾಲಾ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಶಾಲಾ ಮುಖ್ಯೋಪಾಧ್ಯಾಯಿನಿ ರವಿಕಲಾ ಶೆಟ್ಟಿ, ಸ್ಥಳೀಯ ಮುಖಂಡರಾದ ಬಿ.ಕೆ. ಇಬ್ರಾಹಿಂ, ಬಾವಾ, ರಹೀಂ, ಮುನೀರ್ ಸಲೀಂ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಕಾರ್ಯಕಾರಿಣಿ ಸಮಿತಿಗೆ 17 ಸದಸ್ಯರನ್ನು ಆಯ್ಕೆ ಮಾಡಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಹಮ್ಮದ್ ರಫೀಕ್( ಅಧ್ಯಕ್ಷ), ಮನ್ಸೂರ್(ಉಪಾಧ್ಯಕ್ಷ), ಇಸ್ಮಾಯಿಲ್ ಇಶು(ಕಾರ್ಯದರ್ಶಿ), ಮುಹಮ್ಮದ್ ಇಸ್ಮಾಯಿಲ್ ಚಪ್ಪಿ(ಜತೆ ಕಾರ್ಯದರ್ಶಿ), ಮುಹಮ್ಮದ್ ಅಝರುದ್ದೀನ್(ಕೋಶಾಧಿಕಾರಿ), ಫೈಝಲ್(ಕ್ರೀಡಾ ಕಾರ್ಯದರ್ಶಿ), ಸಂಘದ ಸಲಹೆಗಾರರಾಗಿ ವಾರ್ತಾಧಿಕಾರಿ ಖಾದರ್ ಶಾ, ನ್ಯಾಯವಾದಿ ಮುಖ್ತಾರ್ ಅಹಮದ್, ಸಲೀಂ ಹಂಡೇಲ್, ಸೈದುದ್ದೀನ್ ಮತ್ತು ಶಾಲಾ ಮುಖ್ಯೋಪಾಧ್ಯಾಯರನ್ನು ನೇಮಿಸಲಾಯಿತು.
ಬಳಿಕ ಹಳೆ ವಿದ್ಯಾರ್ಥಿ ಸಂಘದ ಸ್ಥಾಪನಾ ಸ್ಮರಣಾರ್ಥವಾಗಿ ಶಾಲಾ ವಠಾರದಲ್ಲಿ ಗಿಡ ನಡೆಲಾಯಿತು.

(ಮುಹಮ್ಮದ್ ರಫೀಕ್)





