ಮಾದಕ ದ್ರವ್ಯ ಸಾಗಣೆ: ಅಮೆರಿಕದ ಕಪ್ಪು ಪಟ್ಟಿಗೆ ವೆನೆಝುವೆಲ ಉಪಾಧ್ಯಕ್ಷ

ವಾಶಿಂಗ್ಟನ್, ಫೆ. 14: ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ ವೆನೆಝುವೆಲದ ಉಪಾಧ್ಯಕ್ಷ ಟರೆಕ್ ಎಲ್ ಐಸಮಿ ಅವರನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿದೆ.
ಇದು ಅಧ್ಯಕ್ಷ ನಿಕೊಲಸ್ ಮಡುರೊ ಸರಕಾರದ ಉನ್ನತ ಅಧಿಕಾರಿಯೋರ್ವರ ವಿರುದ್ಧ ಹಣ ಚೆಲುವೆ ಮತ್ತು ಮಾದಕ ವಸ್ತು ವ್ಯಾಪಾರಕ್ಕಾಗಿ ಟ್ರಂಪ್ ಸರಕಾರ ತೆಗೆದುಕೊಂಡ ಮೊದಲ ಕ್ರಮವಾಗಿದೆ.
ಫಾರೀನ್ ನಾರ್ಕೋಟಿಕ್ಸ್ ಕಿಂಗ್‌ಪಿನ್ ಡೆಸಿಗ್ನೇಶನ್ ಕಾಯ್ದೆಯಡಿ ಎಲ್ ಐಸಮಿ ಅವರ ವಿರುದ್ಧ ದಿಗ್ಬಂಧನ ವಿಧಿಸಲಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.
ಎಲ್ ಐಸಮಿಯ ಚಟುವಟಿಕೆಗಳಿಗೆ ವಸ್ತುರೂಪದ ನೆರವು ಮತ್ತು ಆರ್ಥಿಕ ಬೆಂಬಲ ನೀಡಿರುವುದಕ್ಕಾಗಿ ಅವರ ಸಹಚರ ಸಮರ್ಕ್ ಜೋಸ್ ಬೆಲ್ಲೊ ಅವರನ್ನೂ ಕಪ್ಪು ಪಟ್ಟಿಗೆ ಅಮೆರಿಕ ಸೇರಿಸಿದೆ.
Next Story





