Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ: ಮೂವರು...

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ: ಮೂವರು ಸಾಧಕರಿಗೆ ‘ಸುವರ್ಣ ರಂಗ’ ಸನ್ಮಾನ

ವಾರ್ತಾಭಾರತಿವಾರ್ತಾಭಾರತಿ14 Feb 2017 9:03 PM IST
share
ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ: ಮೂವರು ಸಾಧಕರಿಗೆ ‘ಸುವರ್ಣ ರಂಗ’ ಸನ್ಮಾನ

ಬೆಳ್ತಂಗಡಿ,ಫೆ.14: ಜಾನಪದ, ನಾಡು ನುಡಿ, ಕಲೆ ಮತ್ತು ಸಂಸ್ಕೃತಿಯ ಸೇವೆ ಸಲ್ಲಿಸುವ ಉದ್ದೇಶದಿಂದ ಬೆಳ್ತಂಗಡಿಯಲ್ಲಿ ಹುಟ್ಟಿಕೊಂಡ ಸಂಸ್ಥೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಹಬ್ಬ 7ನೇ ವರ್ಷದ ‘ಸುವರ್ಣಾಸ್ ಯುವ ಜಾನಪದ ಉತ್ಸವ’ ಹಾಗೂ ನಾಡಿನ ಹೆಸರಾಂತ ಕಲಾವಿದರಿಗೆ ಸುವರ್ಣ ರಂಗ ಸಮ್ಮಾನ್ ಸೋಮವಾರ ಸಂಜೆ ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನಡೆಯಿತು.

ಸಾಂಸ್ಕೃತಿಕ ಕ್ಷೇತ್ರದ ಮೇರು ಸಾಧಕರನ್ನು ಗುರುತಿಸಿ, ಅವರ ಕಲಾಸೇವೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಷ್ಠಾನವು ಪ್ರತಿವರ್ಷ ‘ಸುವರ್ಣ ರಂಗ ಸಮ್ಮಾನ್’ ಗೌರವ ಪುರಸ್ಕಾರವನ್ನು ನೀಡುತ್ತಿದೆ. ಈ ಬಾರಿಯ ರಂಗನಟ, ನಿರ್ದೇಶಕ ದೇವದಾಸ್ ಕಾಪಿಕಾಡ್, ಯಕ್ಷಗಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ ಮತ್ತು ಪಂಚಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರಿಗೆ ಸುವರ್ಣ ಪ್ರತಿಷ್ಠಾನದಿಂದ ‘ಸುವರ್ಣ ರಂಗ' ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುವರ್ಣ ರಂಗ ಸಮ್ಮಾನ್  ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ದೇವದಾಸ್ ಕಾಪಿಕಾಡು ಅವರು, ಕಲಾವಿದರಿಗೆ ಜಾತಿ, ಮತ, ಪಂಥ, ಧರ್ಮ ಇಲ್ಲ. ಎಲ್ಲರೂ ಕಲಾವಿದರನ್ನು ಗೌರವಿಸುತ್ತಾರೆ. ಕಲಾಭಿಮಾಭಿಮಾನಿಗಳೇ ಕಲಾವಿದರ ಪೋಷಕರು. ನಾವು ಸಾಧನೆ ಮಾಡಿದ್ದೇವೆ ಎಂದಾದರೆ ಕಲಾಭಿಮಾನಿಗಳು ನೀಡಿದ ಪ್ರೋತ್ಸಾಹವೇ ಕಾರಣ. ಕಲಾವಿದರು ಕೂಡಾ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕ್ಷೇತ್ರವಿರಲಿ ನಾವು ಸಾಧನೆ ಮಾಡಬೇಕಾದರೆ ಶ್ರಮ ಅಗತ್ಯ. ನಮ್ಮ ಸಾಧನೆಯನ್ನು ಗುರುತಿಸಿ  ಸುವರ್ಣ ಪ್ರತಿಷ್ಠಾನ ನಮ್ಮನ್ನು ಗೌರವಿಸಿದೆ. ನಾವು ಚಿರಋಣಿಗಳು ಎಂದರು.

 ಸರಕಾರಿ ಹುದ್ದೆಯಲ್ಲಿದ್ದು ಸಾಮಾಜಿಕ ಚಟುವಟಿಕೆಗೆ ನೀಡಲಾಗುವ ರಾಜ್ಯ ಸರಕಾರದ ಸರ್ವೋತ್ತಮ ಪ್ರಶಸ್ತಿ ಪಡೆದ ಜಯಕೀರ್ತಿ ಜೈನ್, ಪ್ರತಿಭಾನ್ವಿತ ಕಲಾವಿದರಾದ ಚಿತ್ರ ಕಲಾವಿದ ಗಣೇಶ್ ಆಚಾರ್ಯ ಗುಂಪಲಾಜೆ, ಕಾಮಿಡಿ ಕಿಲಾಡಿಯ ಅನೀಶ್ ವೇಣೂರು, ಹಿತೇಶ್ ಕುಮಾರ್ ಕಾಪಿನಡ್ಕ, ಬಾಲ ಪ್ರತಿಭೆಗಳಾದ ಪಂಚಮಿ ಮಾರೂರು,  ಶ್ರೇಯದಾಸ್, ತೌಶಿರ್, ಹೃಷಿಕೇಶ್ ರಾಜರಾಮ್, ವಿವಿಧ ರಂಗದಲ್ಲಿ ಸಾಧನೆ ಮಾಡಿದ  ಕೃಷ್ಣಯ್ಯ ಲಾಲ, ಸ್ಮಿತೇಶ್ ಎಸ್. ಬಾರ್ಯ, ಶಿವಶಂಕರ ಗೇರುಕಟ್ಟೆ, ಚಂದ್ರಹಾಸ್ ಬಳಂಜ, ರಂಜನಿ ರವಿಕುಮಾರ್, ಸ್ಯಾಕ್ಸೋಫೋನ್ ವಾದಕರಾದ ಸಹೋದರಿಯರಾದ ಶ್ರೀಜಾ, ತುಳಸಿ, ಜ್ಯೋತಿ ಅವರನ್ನುಗೌರವಿಸಲಾಯಿತು.

ಉಜಿರೆ ಜನಾರ್ದನ ಸ್ವಾಮಿ ದೇವಳದ ಆಡಳ್ತೆ ಮೋಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಸುಜೀತಾ ವಿ. ಬಂಗೇರ, ಮುಗುಳಿ ನಾರಾಯಣ ರಾವ್, ರಂಜನ್ ಜಿ. ಗೌಡ, ಹರೀಶ್ ಪೂಂಜ, ಡಾ.ಹರ್ಷ ಸಂಪಿಗೆತ್ತಾಯ, ಸದಾನಂದ ಉಂಗೀಲಬೈಲು, ಸೋಮನಾಥ ಸುವರ್ಣ, ನಾಮದೇವ ರಾವ್ ಮುಂಡಾಜೆ, ಸುಧೀರ್ ಸುವರ್ಣ, ಅನಿಲ್ ನಾಯ್ಗ, ಸಂತೋಷ್ ಕುಮಾರ್ ಜೈನ್, ತುಳಸಿದಾಸ್ ಪೈ, ಸಂತೋಷ್ ಕುಮಾರ್ ಕಾಪಿನಡ್ಕ, ದೇವಿಪ್ರಸಾದ್, ಚಿತ್ರಕುಮಾರ್ ಉಡುಪಿ,  ಪ್ರತಿಷ್ಠಾನದ ಮಹಾಪೋಷಕರಾದ ವೈ. ನಾಣ್ಯಪ್ಪ ಪೂಜಾರಿ, ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಮೊದಲಾದವರು ಇದ್ದರು.

‘ಸುವರ್ಣಾಸ್ ಯುವ ಜಾನಪದ ಉತ್ಸವ’ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಶಸ್ತಿ ಪಡೆದ ತಂಡಗಳಿಂದ ಜಾನಪದ ಲೋಕ ಅನಾವರಣಗೊಂಡಿತು.  ಮಂಗಳೂರಿನ ಸಸಿಹಿತ್ಲು ಯುವಕ ಮಂಡಲ, ಪುತ್ತೂರಿನ ಪ್ರಖ್ಯಾತಿ ಯುವತಿ ಮಂಡಲ, ಪುತ್ತೂರಿನ ಕೌಡಿಚ್ಚಾರು ಯುವಕ ಮಂಡಲ, ಬೆಳ್ತಂಗಡಿಯ ಶ್ರೀಗುರು ಮಿತ್ರ ಸಮೂಹ, ಮಂಗಳೂರು ಕಾರ್‌ಸ್ಟ್ರೀಟ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ, ಮುಂಡಾಜೆ ಯಂಗ್ ಚಾಲೆಂಜರ್ಸ್‌ನ ತಂಡಗಳು ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಿದವು.  ಬಿ.ಕೆ. ಧನಂಜಯ ರಾವ್,ಧರಣೇಂದ್ರ ಕುಮಾರ್, ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X